ಕಾಳಿಕಾ ಮಠವು 8 ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಈ ಪ್ರದೇಶದಲ್ಲೇ ಅತ್ಯಂತ ಹಳೆಯದು ಎಂದು ಪರಿಗಣಿತವಾಗಿದೆ. ಸಿಸೋಡಿಯಾ ಸಾಮ್ರಾಜ್ಯದ ರಾಜ ಬಪ್ಪಾ ರಾವಲ್ ಈ ಸೂರ್ಯ ದೇವಸ್ಥಾನವನ್ನು ನಿರ್ಮಿಸಿದರು. 14 ನೇ ಶತಮಾನದಲ್ಲಿ ಮಹಾರಾಣ ಹಮೀರ್ ಸಿಂಗ್ ದೇವಸ್ಥಾನದಲ್ಲಿ ಕಾಳಿಕಾ ಮೂರ್ತಿಯನ್ನು ಸ್ಥಾಪಿಸಿದರು. ಅಲ್ಲಿಂದ ಈ ದೇವಸ್ಥಾನವು ಕಾಳಿಕಾ ಮಠವಾಗಿ ಜನಪ್ರಿಯವಾಯಿತು. ಕಾಳಿ ಮಾತೆಯು ಚಿತ್ತೋರಗಢದ ರಕ್ಷಕಿ ಎಂದು ಭಾವಿಸಲಾಗಿದೆ. ಕಾಳಿಕಾ ಮಠವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡಿದೆ. ಕಾಳಿಕಾ ಮಠದಲ್ಲಿ ನಡೆಯುವ ವಾರ್ಷಿಕ ಹಬ್ಬವು ಇಲ್ಲಿಗೆ ಅಪಾರ ಪ್ರಮಾಣದ ಭಕ್ತರನ್ನು ಆಕರ್ಷಿಸುತ್ತದೆ.


Click it and Unblock the Notifications