ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಿಂದ 7 ಕಿ.ಮೀ. ದೂರದಲ್ಲಿರುವ ಮುದ್ದೇನಹಳ್ಳಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ. ವಿಶ್ವೇಶ್ವರಯ್ಯನವರ ಜನಿಸಿದ ಮನೆಯಲ್ಲಿ ಇಂದು ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಈ ಮನೆಯಲ್ಲಿ ವಿಶ್ವೇಶ್ವರಯ್ಯನವರು ಬಳಸಿದ ವಸ್ತುಗಳು, ಬರೆದ ಕಾಗದಗಳು, ಅವರ ಫೋಟೋಗಳನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ.ದ್ರಾವಿಡರ ಶೈಲಿಯಲ್ಲಿ ಕಟ್ಟಿಸಲಾದ ಭೋಗ ನಂದೀಶ್ವರ ದೇವಸ್ಥಾನವು ಇಂದಿಗೂ ಹಲವಾರು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಫಕೀ ಶಾ ವಾಲಿಯ ಮುರುಗಮುಲ್ಲಾ ದರ್ಗಾ ಸೂಫಿ ಸಂತರ ಸಾಲಿನ ದರ್ಗಾ ಆಗಿದೆ. ಕರ್ನಾಟಕದ ಹಳೆಯ ದರ್ಗಾ ಎನ್ನಲಾಗಿದೆ. ಈ ದರ್ಗಾದಲ್ಲಿ ಪ್ರತಿ ವರ್ಷ ನಡೆಯುವ ಉರುಸ್ ಗೆ ರಾಜ್ಯದ ವಿವಿಧೆಡೆಯಿಂದ ಅಪಾರ ಪ್ರಮಾಣದ ಭಕ್ತಸಮೂಹ ಹರಿದು ಬರುತ್ತದೆ.

Please Wait while comments are loading...