Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಬಳ್ಳಾಪುರ » ಆಕರ್ಷಣೆಗಳು » ಸರ್.ಎಂ.ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ

ಸರ್.ಎಂ.ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯ, ಚಿಕ್ಕಬಳ್ಳಾಪುರ

1

ಚಿಕ್ಕಬಳ್ಳಾಪುರದಲ್ಲಿ ಭಾರತದ ಪ್ರಖ್ಯಾತ ಎಂಜಿನಿಯರ್ ಎಂದೇ ಹೆಸರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಗೌರವಾರ್ಥ ವಸ್ತುಸಂಗ್ರಹಾಲಯ ಸ್ಥಾಪಿಸಲಾಗಿದೆ. ಭೌಗೋಳಿಕ , ವೈಜ್ಞಾನಿಕ, ತಾಂತ್ರಿಕ, ಎಲೆಕ್ಟ್ರಾನಿಕ್, ಯಂತ್ರಗಳ ವಿಭಾಗಗಳು ಇಲ್ಲಿವೆ. ವಿವಿಧ ಅಂತಸ್ತುಗಳಲ್ಲಿ ಎಲ್ಲವನ್ನೂ ಹೊಂದಿಸಿಡಲಾಗಿದೆ.ಈ ವಸ್ತುಸಂಗ್ರಹಾಲಯ ಕಟ್ಟಡದಲ್ಲಿ ಆಕಾಶಕಾಯಗಳ ಕುರಿತಾದ ವಿಶಿಷ್ಟ ವಿಭಾಗ, ಆಟದೊಂದಿಗೆ ವಿಜ್ಞಾನ ಕಲಿಯುವ ವಿಭಾಗ, ಸಸ್ಯಶಾಸ್ತ್ರದ ವಿಭಾಗ ಮತ್ತು ಪ್ರಾಚೀನ ಕಾಲದಲ್ಲಿದ್ದ ಬೃಹದಾಕಾರದ ಪ್ರಾಣಿಗಳಾದ ಡೈನೋಸಾರ್ ಗಳ ಕುರಿತಾದ ಸಮಗ್ರ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ.ವಿಮಾನ ಕಂಡುಹಿಡಿದ ರೈಟ್ ಅಣ್ಣ ತಮ್ಮಂದಿರ ಕುರಿತಾದ ವಿಶೇಷವಾದ ವಿಭಾಗವನ್ನೇ ತೆರೆಯಲಾಗಿದೆ. ಇಲ್ಲಿ ತಾರಾಮಂಡಲ ಕುರಿತಾದ ಚಿತ್ರಪ್ರದರ್ಶನ, ವೈಜ್ಞಾನಿಕ ಪ್ರದರ್ಶನ, ಆಕಾಶಕಾಯಗಳ ವೀಕ್ಷಣೆ, ವಿವಿಧ ವಿಷಯಗಳ ಕುರಿತು ಉಪನ್ಯಾಸ ಕೂಡ ಕೇಳಬಹುದು.ಈ ವಸ್ತುಸಂಗ್ರಹಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮೇಳ, ವೈಜ್ಞಾನಿಕ ವಿಷಯಕ್ಕೆ ಸಂಬಂಧಪಟ್ಟಂತೆ ವಿವಿಧ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಬೇರೆಲ್ಲಿಯೂ ಇರದಂತಹ ಹಲವಾರು ವಿಶೇಷಗಳು ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದಲ್ಲಿ ಕಾಣಬಹುದು. ವಿದ್ಯುತ್ ಉತ್ಪಾದನೆ, ವಿಮಾನಗಳ ಯಂತ್ರ, ಉಗಿಬಂಡಿಯ ಕಾರ್ಯವೈಖರಿ, ವಿವಿಧ ಬಗೆಯ ಕ್ಯಾಲ್ಕುಲೇಟರ್ ಗಳು, ದೂರವಾಣಿ, ಗ್ರಾಮೋಫೋನ್, ಹೊಲಿಗೆ ಯಂತ್ರ ಸೇರಿದಂತೆ ತಾಂತ್ರಿಕ ಕ್ಷೇತ್ರಕ್ಕೆ ಸಬಂಧಿಸಿದ ಎಲ್ಲ ಮಾಹಿತಿಗಳನ್ನು ಇಲ್ಲಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಗಳನ್ನು ಇಲ್ಲಿ ನೀಡಲಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat