ಗುರುದ್ವಾರ ಕೂಹ್ನಿನ್ನು ಬಗೀಚಾ ಸಾಹಿಬ್ ಎಂದು ಕರೆಯುತ್ತಾರೆ. ಇಲ್ಲಿ ಗುರು ಗೋವಿಂದ ಸಿಂಗ್ ಜಿ ಅವರು ತನ್ನ ಸೈನಿಕರೊಂದಿಗೆ ಒಂದು ವಾರ ತನಕ ವಾಸ್ತವ್ಯ ಹೂಡಿದ್ದರಂತೆ. ಪುರಾಣಗಳ ಪ್ರಕಾರ ತನ್ನ ಪತಿ ರಾಮ್ ರಾಯ್ ನ್ನನು ಬಿಟ್ಟು ಡೆಹ್ರಾಡೂನ್ ನಿಂದ ಇಲ್ಲಿಗೆ ಬಂದು ನೆಲೆ ನಿಂತಿದ್ದ ಮಾತಾ ರಾಜ್ ಕೌರ್ ಅವರನ್ನು ಭೇಟಿ ಮಾಡಲು ಗುರು ಸಾಹಿಬ್ ಇಲ್ಲಿಗೆ ಭೇಟಿ ನೀಡಿದ್ದರಂತೆ. ಈ ಧಾರ್ಮಿಕ ಕ್ಷೇತ್ರವು ಚಂದೀಗಢ್-ಮನ್ಸಾ ದೇವಿ ರಸ್ತೆಯಲ್ಲಿದೆ. ಇದು ಜನಪ್ರಿಯ ಗುರುದ್ವಾರವಲ್ಲದಿದ್ದರೂ ಸಮಯ ಸಿಕ್ಕಿದರೆ ಭೇಟಿ ನೀಡಬಹುದು.


Click it and Unblock the Notifications