ಖಾಗ್ ಹಳ್ಳಿಯ ಸಮೀಪವಿರುವ ಸುಂದರ ತೊರೆಯನ್ನು ನರ ನಾಗ್ ಅಥವಾ ನರೇನ್ ನಾಗ್ ಎಂದು ಕರೆಯಲಾಗುತ್ತದೆ. ಈ ತೊರೆ ಹುಟ್ಟುವುದು ತೋಸಮೈದಾನ್ ಕೆರೆಯಲ್ಲಿ. ಹಲವು ಕಿ.ಮೀ ತನಕ ಹರಿಯುವ ಈ ತೊರೆಯು ನಂತರ ಕೆರೆಯನ್ನು ಸೇರುತ್ತದೆ.
ನರ ನಾಗ್ ಮತ್ತು ತೋಸಮೈದಾನ್ ಮಧ್ಯೆ ಹಲವು ವರ್ಷಗಳ ಹಿಂದೆಯೇ ತೊರೆ ನಿರ್ಮಾಣವಾಗುವ ಮೂಲಕ ಸಂಪರ್ಕ ಉಂಟಾಯಿತು ಎಂದು ಐತಿಹ್ಯಗಳು ಹೇಳುತ್ತವೆ. ಈ ತೊರೆಯನ್ನು ಕಂಡು ಹಿಡಿದ ವ್ಯಕ್ತಿಯೇ ಎರಡೂ ಕೆರೆಗಳಿಗೆ ಸಂಪರ್ಕವಿರುವುದನ್ನು ಗುರುತಿಸಿದ ಎಂದು ಹೇಳಲಾಗುತ್ತದೆ. ಕುರಿ ಸಗಣಿಯನ್ನು ತುಂಬಿದ್ದ ಒಂದು ಬ್ಯಾಗನ್ನು ಪ್ರವಾಸಿಯೊಬ್ಬ ಹೊತ್ತೊಯ್ಯುತ್ತಿದ್ದ. ಆಕಸ್ಮಿಕವಾಗಿ ಈ ಚೀಲ ತೋಸಮೈದಾನ್ ಕೆರೆಗೆ ಬಿತ್ತು. ಕೆಲವು ದಿನಗಳ ನಂತರ ಇದೇ ಚೀಲ ನರ ನಾಗ್ ಕೆರೆಯಲ್ಲಿ ತೇಲುತ್ತಿರುವುದನ್ನು ನೋಡಿ ಆಶ್ಚರ್ಯಚಕಿತನಾದ. ತನ್ನ ಅನುಮಾನವನ್ನು ಪರಿಹರಿಸಿಕೊಳ್ಳುವುದಕ್ಕೆಂದು ಮತ್ತೊಮ್ಮೆ ತೋಸಮೈದಾನ್ ಕೆರೆಗೆ ಹೋಗಿ ಒಂದಷ್ಟು ಅರಿಶಿಣವನ್ನು ಚೆಲ್ಲಿದ. ಈತನ ಅನುಮಾನ ನಿಜವಾಯಿತು. ಕೆಲವೇ ದಿನಗಳಲ್ಲಿ ನರ ನಾಗ್ ಕೆರೆಯೂ ಅರಿಶಿಣವಾಯಿತು.


Click it and Unblock the Notifications