ದಟ್ಟ ಕಾಡು, ಗುಡ್ಡಗಳು ಮತ್ತು ತೊರೆಗಳ ಮಧ್ಯೆ ಇರುವ ದೂದ್‌ಪಥರ‍್ ಬಡ್ಗಮ್ ನಲ್ಲಿರುವ ಒಂದು ರಮಣೀಯ ತಾಣ. ಸ್ಥಳೀಯರ ನಂಬಿಕೆ ಪ್ರಕಾರ, ನೀರನ್ನು ಹುಡುಕುತ್ತಾ ಕಾಶ್ಮೀರಿ ಸಂತ ನಂದ್‌ರೇಶಿ ಎಂಬುವವರು ಈ ಪ್ರದೇಶಕ್ಕೆ ಆಗಮಿಸಿದರು. ಋಷಿಯು ನೀರಿಗಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಹಾಲು ಉಕ್ಕಿ ಬಂತು ಎಂದು ಹೇಳಲಾಗುತ್ತದೆ. ಇವರ ನಂತರ ಈ ಪ್ರದೇಶವನ್ನು ದೂದ್ ಪಥರ‍್ ಎಂದೇ ಕರೆಯಲಾಯಿತು. ಹಿಂದಿಯಲ್ಲಿ ದೂದ್ ಎಂದರೆ ಹಾಲು ಪಥರ‍್ ಎಂದರೆ ಕಲ್ಲು ಎಂದಾಗುತ್ತದೆ. ದೂದ್‌ಪಥರ‍್ ಸುತ್ತಲಿರುವ ಇತರ ಪ್ರಮುಖ ತಾಣಗಳೆಂದರೆ ಸಾಚಿಲ್‌ಪಥರ‍್, ಮುಜಪಥರ‍್. ದೋಫಖಲ್, ಪಾಮೈದಾನ್, ಪರಿಹಾಸ್ ಮತ್ತು ಟಂಗಾನರ‍್.


Click it and Unblock the Notifications