ಮೌರ್ಯರ ಕಾಲದ ಈ ಗುಹೆಗಳು ಭಾರತದಲ್ಲಿರುವ ಕಲ್ಲಿನಿಂದ ಕೆತ್ತಲಾದ ಗುಹೆಗಳಲ್ಲಿ ಅತ್ಯಂತ ಹಳೆಯದು ಎಂಬ ಹಿರಿಮೆಗೆ ಪಾತ್ರವಾಗಿವೆ. ಬರಾಬರ್ ಗುಹೆಗಳಲ್ಲಿ ಹೆಚ್ಚಿನವು ಎರಡು ಅಂತಸ್ತುಗಳನ್ನು ಹೊಂದಿವೆ. ಗ್ರಾನೈಟ್ ಕಲ್ಲಿನಿಂದ ಕೆತ್ತಲಾದ ಗುಹೆಗಳು ಒಳಗಿನಿಂದ ಬಹಳ ಹೊಳಪಿನಿಂದ ಕೂಡಿವೆ. ಇಲ್ಲಿನ ನಾಲ್ಕು ಪ್ರಮುಖ ಗುಹೆಗಳೆಂದರೆ ಕರನ್ ಚೌಪರ್, ಲೊಮಸ್ ರಿಷಿ, ಸುದಾಮಾ ಮತ್ತು ವಿಸ್ವ ಝೋಪ್ರಿ. ಇವುಗಳಲ್ಲಿ ಪ್ರತಿಯೊಂದೂ ಆಕರ್ಷಕವಾಗಿವೆ. ಕಲ್ಲಿನಿಂದ ಕೆತ್ತಿದ ವಾಸ್ತಿಶಿಲ್ಪದ ಶ್ರೇಷ್ಟತೆಗೆ ಹಾಗೂ ಸೌಂದರ್ಯಕ್ಕೆ ಈ ಗುಹೆಗಳು ಸಾಕ್ಷಿಯಾಗಿವೆ.


Click it and Unblock the Notifications