ಭಾರತ ಭವನ ವಿವಿಧ ಕಲೆಗಳ ಕೇಂದ್ರವಾಗಿದ್ದು ಇಲ್ಲಿ ಮೌಖಿಕ, ಪ್ರದರ್ಶನ ಕಲೆ ಮತ್ತು ದೃಶ್ಯ ಕಲೆಗಳ ಸಂಗಮ ನಡೆಯುತ್ತದೆ. ಇದು ಭೋಪಾಲ್ ನಗರದ ಎಲ್ಲಾ ಕಲೆಗಳ ಪ್ರಮುಖ ಸ್ಥಳವಾಗಿದೆ. ನೀವು ಪ್ರದರ್ಶನ ಕಲೆಗಳ ಆಸಕ್ತರಾಗದೇ ಇದ್ದರೂ ಇಲ್ಲಿಗೆ ಭೇಟಿ ಕೊಡುವಂತಹ ಸ್ಥಳವಾಗಿದೆ. ಇಲ್ಲಿನ ಕಟ್ಟಡದ ವಿನ್ಯಾಸವೇ ಅಂತಹುದಾಗಿದೆ. ಇಲ್ಲಿನ ಸುತ್ತಮುತ್ತಲ ಪರಿಸಾರದೊಂದಿಗೆ ಹೊಂದಿಕೊಳ್ಳುವ ಹಾಗೆ ಈ ಕಟ್ಟಡದ ವಿನ್ಯಾಸ ಇದೆ. ಪ್ರತಿ ವರ್ಷ ಇಲ್ಲಿ ಸಾವಿರಾರು ಪ್ರವಾಸಿಗಳು ಭೇಟಿ ನೀಡುತ್ತಾರೆ ಹಾಗೂ ಮತ್ತೆ ಮತ್ತೆ ಭೇಟಿ ನೀಡುತ್ತಲೇ ಇರುತ್ತಾರೆ.
ಇಲ್ಲಿ ಹಳೆಯ ಮತ್ತು ಹೊಸ ಮಾದರಿಯ ಕಲೆಗಳ ಪ್ರದರ್ಶನವೂ ನಡೆಯುತ್ತದೆ. ಇದು ಎಲ್ಲಾ ರೀತಿಯ ಕಲೆಗಳ ಪ್ರೋತ್ಸಾಹಕ್ಕೆ ಕಟ್ಟಿದ ಕಟ್ಟಡವಾಗಿದೆ. ಎಲ್ಲಾ ಪ್ರಕಾರಗಳ ರಸದೌತಣ ಇಲ್ಲಿ ಸಿದ್ಧ. ಇಲ್ಲಿ ಬುಡಕಟ್ಟು ಜನರ ಕರಕುಶಲ ವಸ್ತುಗಳು ಮತ್ತು ಜೀವನ ಶೈಲಿಯನ್ನು ಬಿಂಬಿಸುವ ಒಂದು ವಸ್ತು ಸಂಗ್ರಹಾಲಯವೂ ಇದೆ. ಇಲ್ಲಿ ಮಧ್ಯ ಪ್ರದೇಶ ಮತ್ತು ಬೇರೆ ರಾಜ್ಯಗಳ ಬುಡಕಟ್ಟು ಜನರು ಮತ್ತು ಅವರ ಜೀವನದ ಬಗ್ಗೆ ಹೆಚ್ಚಿನ ನೀವು ಹೆಚ್ಚಿನ ಕಲ್ಪನೆ ಪಡೆಯಬಹುದಾಗಿದೆ.


Click it and Unblock the Notifications