ವನ ವಿಹಾರ, ಭೋಪಾಲ್ ನ ಒಂದು ರಾಷ್ಟ್ರೀಯ ಉದ್ಯಾನವನವಾಗಿದೆ ಮತ್ತು ನಗರದ ಮಧ್ಯದಲ್ಲಿ ಸ್ಥಿತವಾಗಿದೆ. ಈ ಉದ್ಯಾನವನ 445 ಹೆಕ್ಟರ್ ಪ್ರದೇಶವನ್ನು ವ್ಯಾಪಿಸಿದೆ. ಮತ್ತು ಬೆಟ್ಟದ ಮೇಲೆ ನಿಂತು ಸಂಪೂರ್ಣ ನಗರವನ್ನು ಕಾಣಬಹುದು. ಈ ಸ್ಥಳ ಪ್ರವಾಸಿಗರ ನಡುವೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಸಾವಿರಾರು ಜನರು ಪ್ರತಿ ತಿಂಗಳೂ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ರಾಷ್ಟ್ರೀಯ ಉದ್ಯಾನವನ ಮೆದುವಾದ ಹುಲ್ಲುಗಾವಲುಗಳನ್ನು ಹೊಂದಿದ್ದು ವರ್ಷ ಪೂರ್ತಿ ಹಸಿರಿನಿಂದ ಕೂಡಿರುತ್ತದೆ.
ಈ ಉದ್ಯಾನವನವು ಸಸ್ಯಾಹಾರಿಗಳಿಗೆ ಮತ್ತು ಮಾಂಸಹಾರಿಗಳಿಗೆ ಅವರು ತಮ್ಮ ನೈಸರ್ಗಿಕ ವಾಸಸ್ಥಾನದಂತೆ ಇಲ್ಲಿ ಸಂಚರಿಸಲು ವೈವಿದ್ಯಮಯ ನೆಲೆಯಾಗಿದೆ. ಆದಾಗ್ಯೂ, ಇಲ್ಲಿರುವ ಪ್ರಾಣಿಗಳ ವೈವಿದ್ಯತೆಗೆ ಅನುಗುಣವಾಗಿ ಇದನ್ನು ಮೃಗಾಲಯಕ್ಕಿಂತ ಹೆಚ್ಚಾಗಿ ಒಂದು ಉದ್ಯಾನವನದಂತೆ ನಿರ್ಮಿಸಲಾಗಿದೆ. ಅಲ್ಲದೆ, ವನ ವಿಹಾರ, ಭಾರತದ ವಿವಿಧ ರಾಜ್ಯಗಳಿಂದ ಬರುವ ಅನೇಕ ಅನಾಥ ಪ್ರಾಣಿಗಳಿಗೆ ನೆಲೆಯಾಗಿದೆ. ಕೆಲವು ಪ್ರಾಣಿಗಳು ಇತರ ಪ್ರಾಣಿಗಳಿಗೆ ವಿನಿಮಯವಾಗಿ ಸಹ ಇಲ್ಲಿ ಬಂದು ಸೇರಿವೆ. ಈ ಸ್ಥಳಕ್ಕೆ ಭೇಟಿ ನಿಡಲೇಬೇಕು ಅದರಲ್ಲೂ ವಿಶೇಷವಾಗಿ ನಿಮ್ಮೊಂದಿಗೆ ಮಕ್ಕಳಿದ್ದರೆ ಈ ಸ್ಥಳಕ್ಕೆ ಭೇಟಿ ನಿಡುವುದನ್ನು ತಪ್ಪಿಸಿಕೊಳ್ಳಲೇಬೇಡಿ.