Search
  • Follow NativePlanet
Share
ಮುಖಪುಟ » ಸ್ಥಳಗಳು » ಭೋಪಾಲ್ » ಆಕರ್ಷಣೆಗಳು » ಮೋತಿ ಮಸೀದಿ

ಮೋತಿ ಮಸೀದಿ, ಭೋಪಾಲ್

1

ಮೋತಿ ಮಸೀದಿ ಕೇವಲ ಭೋಪಾಲ್ ಇತಿಹಾಸದಲ್ಲಿ ಒಂದು ಪ್ರಮುಖ ವಾಸ್ತುಶಿಲ್ಪೀಯ ಹೆಗ್ಗುರುತಾಗಿರದೆ ಭಾರತದ ಮುಸಲ್ಮಾನ ಮಹಿಳೆಯರ ಇತಿಹಾಸದಲ್ಲಿ ಗಮನಾರ್ಹವಾಗಿದೆ. 1860 ರಲ್ಲಿ ಮಸೀದಿಯ ನಿರ್ಮಾಣಕ್ಕೆ ಮಹಿಳಾ ಮುಸ್ಲಿಂ ರಾಣಿ ಸಿಕಂದರ್ ಬೇಗಂ ಆದೇಶ ನೀಡಿದ್ದಳು. ಆ ಕಾಲದಲ್ಲಿ ಈಕೆ ಉತ್ತಮ ಎನ್ನಬಹುದಾದ ಶಿಕ್ಷಣವನ್ನು ಹೊಂದಿದ್ದಳಲ್ಲದೆ ಆಧುನಿಕತೆಯ ರೂಪವನ್ನೂ ಮೈಗೂಡಿಸಿಕೊಂಡಿದ್ದಳು.

ಮೋತಿ ಮಸೀದಿಯ ನಿರ್ಮಾಣ ಮತ್ತು ವಾಸ್ತುಶಿಲ್ಪದ ಬಗ್ಗೆ ಹೇಳುವುದಾದರೆ ಮೋತಿ ಮಸೀದಿಯು ದೆಹಲಿಯಲ್ಲಿ ಸ್ಥಾಪಿತವಾಗಿರುವ ಜಾಮಾ ಮಸೀದಿಯಿಂದ ಎರವಲು ಪಡೆದ ವಾಸ್ತುಶಿಲ್ಪ ಶೈಲಿಯದ್ದಾಗಿದೆ. ಅದರ ಸಣ್ಣ ಗಾತ್ರದ ಹೊರತಾಗಿಯೂ, ಮೋತಿ ಮಸೀದಿಯ ಜಿಜ್ಞಾಸೆ ಮತ್ತು ಅದ್ಭುತ ವಾಸ್ತುಶಿಲ್ಪ ವಿನ್ಯಾಸಗಳಿಂದಾಗಿ ಪ್ರತಿ ವರ್ಷ ಅನೇಕ ಪ್ರವಾಸಿಗರು ಭೇಟಿ ನೀಡುತ್ತಾರೆ.

ದಟ್ಟವಾದ ಕೆಂಪು ಬಣ್ಣದ ಗೋಪುರಗಳು ಮತ್ತು ಚಿನ್ನದ ಈಟಿ ತರಹದ ರಚನೆಗಳ ಸಂಯೋಜನೆ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬಿಳಿ ಅಮೃತಶಿಲೆ ಬಳಸಿ ನಿರ್ಮಿಸಿದ ಮಸೀದಿಯ ಬಣ್ಣ ಮುಖ್ಯವಾಗಿ ಬಿಳಿ ಬಣ್ಣ. ಒಟ್ಟಾರೆಯಾಗಿ ಈ ಸ್ಥಳದಲ್ಲಿ ಸ್ವರ್ಗೀಯ ನೋಟವನ್ನೊದಗಿಸುತ್ತದೆ. ಈ ಕಾರಣದಿಂದ ಈ ಮಸೀದಿಯನ್ನು ಪರ್ಲ್ ಮಸೀದಿ ಎಂದು ಕೂಡ ಕರೆಯಲಾಗುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat