12 ನೇ ಶತಮಾನದ ಈ ಹಳ್ಳಿಯನ್ನು ಒಂದೊಮ್ಮೆ ವೀರಾನಿಪುರ್ ಎಂದು ಕರೆಯಲಾಗುತ್ತಿತ್ತು. ನಗರ್ - ಕಿ - ಭಾಕರಿಯಾ ಎಂಬ ಗುಡ್ಡದ ಇಳಿಜಾರು ಪ್ರದೇಶದಲ್ಲಿರುವ ಈ ಹಳ್ಳಿಯು, ಬಾಡಮೇರ್ ಜಿಲ್ಲೆಯ ಬಲೊತಾರಾದಿಂದ 9 ಕಿ.ಮೀ ದೂರದಲ್ಲಿದೆ. ಇಲ್ಲಿ ಮೂರು ಜೈನ ಮಂದಿರಗಳ ಜೊತೆ, ಒಂದು ವಿಷ್ಣು ದೇವಸ್ಥಾನವನ್ನು ಕಾಣಬಹುದು. ಇಲ್ಲಿಯ ಮೂರು ಜೈನ ಮಂದಿರಗಳಲ್ಲಿ ನಕೊಡಾ ಪಾರ್ಶ್ವನಾಥ ಮಂದಿರವು ದೊಡ್ಡದಾಗಿದೆ.