Search
  • Follow NativePlanet
Share
ಮುಖಪುಟ » ಸ್ಥಳಗಳು » ಬಾಡಮೇರ್ » ಹವಾಮಾನ

ಬಾಡಮೇರ್ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದ ಅವಧಿಯು ಬಾಡಮೇರ್ ಗೆ ಹೋಗಲು ಉತ್ತಮವಾಗಿದೆ. ಈ ಸಮಯದಲ್ಲಿ ಈ ಮರಭೂಮಿ ಪ್ರದೇಶವು ಹಿತವೆನ್ನಬಹುದಾದಂತಹ ವಾತಾವರಣವನ್ನು ಹೊಂದಿರುತ್ತದೆ. ಮಾರ್ಚ್ ತಿಂಗಳಿನಲ್ಲಿ ನಡೆಯುವ ಥಾರ್ ಉತ್ಸವಕ್ಕೆ ಅನೇಕ ಪ್ರವಾಸಿಗರು ಆಗಮಿಸುತ್ತಾರೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬಾಡಮೇರ್ ಬೇಸಿಗೆಯಲ್ಲಿ ಅತಿಯಾದ ಉಷ್ಣತೆಯಿಂದ ಕೂಡಿದ್ದು, ಮೇ ತಿಂಗಳಿನಲ್ಲಿ ತಾಪಮಾನವು 46° C ವರೆಗೂ ಇರುತ್ತದೆ. ಕನಿಷ್ಟ ಉಷ್ಣಾಂಶವು 23° C ಇರುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್): ಈ ಪ್ರದೇಶವು ಅತ್ಯಲ್ಪ ಮಳೆಯನ್ನು ಪಡೆಯುತ್ತದೆ. ಎಷ್ಟೊ ಸಲ ಮಳೆಗಾಲದಲ್ಲಿ, ಈ ಪ್ರದೇಶ ಮಳೆಯಿಲ್ಲದೆ ಒಣಗಿದ್ದೆ ಇರುತ್ತದೆ. ಕೆಲವೊಮ್ಮೆ ವಾಯುಭಾರದ ಕುಸಿತದಿಂದಾಗಿ ಅತಿರೇಕವಾದ ಮಳೆಯು ವರ್ಷದ ಯಾವುದೇ ಕಾಲದಲ್ಲಿ ಬೀಳುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರುವರಿ): ಈ ಸಮಯದಲ್ಲಿ ಮೈಕೊರೆಯುವ ಚಳಿ ಇರುವುದಿಲ್ಲ ಮತ್ತು ಅಹ್ಲಾದಕರವಾದ ವಾತಾವರಣವಿರುತ್ತದೆ. ಗರಿಷ್ಟ ತಾಪಮಾನವು 36° C ಯಾಗಿದ್ದು ಕನಿಷ್ಟ ತಾಪಮಾನವು 10° C ಇರುತ್ತದೆ.