Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಶೇಷಾದ್ರಿ ಐಯರ್ ಸ್ಮಾರಕ ಭವನ

ಶೇಷಾದ್ರಿ ಐಯರ್ ಸ್ಮಾರಕ ಭವನ, ಬೆಂಗಳೂರು

3

ಶೇಷಾದ್ರಿ ಐಯರ್ ಸ್ಮಾರಕ ಭವನವು ಬೆಂಗಳೂರಿನ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ತನ್ನ ಪಕ್ಕಾ ಯೂರೊಪಿಯನ ಶೈಲಿಯ ನಿರ್ಮಾಣದಿಂದಾಗಿ ಖ್ಯಾತಿ ಪಡೆದಿದೆ. ಇದನ್ನು 1883 ರಿಂದ 18 ವರ್ಷಗಳ ಕಾಲ ಮೈಸೂರು ರಾಜ್ಯದ ದೀವಾನರಾಗಿದ್ದಂತಹ ಕೆ.ಶೇಷಾದ್ರಿ ಐಯರ್ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ಶ್ರೀ ಶೇಷಾದ್ರಿಯವರು ತಮ್ಮ ಸೇವೆಯಲ್ಲಿ ತೋರ್ಪಡಿಸಿದ ಶೃದ್ಧೆ ಹಾಗು ದಕ್ಷತೆಯ ಗೌರವಾರ್ಥವಾಗಿ, ಇದು ಅಂದಿನ ಬ್ರೀಟಿಷ ವೈಸ್ ರಾಯ್ ನಾದ ಲಾರ್ಡ್ ಕರ್ಜನ್ ನಿಂದ ನಿರ್ಮಾಣವಾಗಿದೆ.ಈ ಶೇಷಾದ್ರಿ ಭವನದ ಕಟ್ಟಡವು ಬೆಂಗಳೂರಿನ ಆಡಳಿತಾತ್ಮಕ ಕೇಂದ್ರಭಾಗದಲ್ಲಿರುವ ಕಬ್ಬನ ಉದ್ಯಾನವನದಲ್ಲಿದೆ.ಕಟ್ಟಡವು ಕೆಂಪು ಬಣ್ಣದಿಂದ ನಿರ್ಮಿತವಾಗಿದ್ದು, ಅದರ ಮುಂಭಾಗ ಗುಲಾಬಿ ಹೂದೋಟವಿದ್ದು, ಒಂದು ಮಾದಕ ಸೌಂದರ್ಯ ಮತ್ತು ಕಲೆಯಿಂದ ತುಂಬಿದ ರಚನೆಯಾಗಿ ಹೊರಹೊಮ್ಮುತ್ತದೆ. ಈ ಕಟ್ಟಡದಲ್ಲಿ, 830 ರಿಂದ 1900 ರ ಅವಧಿಯಲ್ಲಿನ 2.65 ಲಕ್ಷ ಪುಸ್ತಕಗಳ ಸಂಗ್ರಹವಿರುವ ಗ್ರಂಥಾಲಯವಿದ್ದು ಓದುಗರ ಸ್ವರ್ಗವೆನಿಸಿದೆ. ಗ್ರಂಥಾಲಯವು ಪ್ರತಿ ಸೋಮವಾರ ಮುಚ್ಚಿದ್ದು,ತನ್ನಲ್ಲಿರುವ ಉತ್ತಮವಾದ ಬ್ರೇಯಿಲ್ ಲಿಪಿಯ ಸಂಗ್ರಹಕ್ಕೂ ಹೆಸರುವಾಸಿಯಾಗಿದೆ. ಉಳಿದ ದಿನಗಳಲ್ಲಿ ಗ್ರಂಥಾಲಯವು ಸಾಮಾನ್ಯವಾಗಿ ಬೆಳಿಗ್ಗೆ 8.30 ರಿಂದ ಸಾಯಂಕಾಲ 7 ಘಂಟೆಯವರೆಗೆ ಕಾರ್ಯ ನಿರ್ವಹಿಸುತ್ತದೆ. ಒಂದು ದಂತಕಥೆಯಂತಿರುವ ಈ ಕಟ್ಟಡವು ಸುಮಾರು 300 ಚ.ಕಿ.ಮೀ. ವಿಸ್ತಿರ್ಣವನ್ನು ಹೊಂದಿದೆ. ಹಚ್ಚಹಸಿರಿನ ನಡುವೆ ಕೆಂಪು ಬಣ್ಣ ಹೊಂದಿರುವ ಈ ಕಟ್ಟಡ ಎದ್ದು ಕಾಣುವಂತಾಗಿದ್ದು ಸೌಂದರ್ಯಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ. ಈ ಕಾರಣದಿಂದಲೂ ಕೂಡ, ಈ ಸ್ಥಳಕ್ಕೆ ಬರುವ ಅನೇಕ ಪ್ರವಾಸಿಗರು ಈ ಕಟ್ಟಡಕ್ಕೂ ಭೇಟಿ ನೀಡುತ್ತಾರೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat