Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ವಿಕಾಸ ಸೌಧ

ವಿಕಾಸ ಸೌಧ, ಬೆಂಗಳೂರು

3

ಬೆಂಗಳೂರಿನ ವಿಕಾಸ ಸೌಧವು ಕಣ್ಣಿಗಾನಂದವನ್ನುಂಟುಮಾಡುವ ಮತ್ತೊಂದು ಕಟ್ಟಡ. ಕರ್ನಾಟಕ ಸರ್ಕಾರದಿಂದ ನಿರ್ಮಿಸಲ್ಪಟ್ಟ ಅತ್ಯುತ್ತಮ ಕಟ್ಟಡಗಳಲ್ಲಿ ಇದೂ ಒಂದಾಗಿದೆ. ಇದು 2005 ರಲ್ಲಿ ಉದ್ಘಾಟಿಸಲ್ಪಟ್ಟಿತು. ವಿಧಾನ ಸೌಧದ ದಕ್ಷಿಣಕ್ಕೆ ಅದರ ಸಹೋದರಿಯ ಹಾಗೆ ನಿಂತಿರುವ ಈ ಕಟ್ಟಡವನ್ನು ಸಚಿವಾಲಯದ ಹಲವು ಕಛೇರಿಗಳನ್ನು ಸ್ಥಾಪಿಸಲು ನಿರ್ಮಿಸಲಾಗಿದೆ. ಮೆಜೆಸ್ಟಿಕನಂತಹ ಬಸ್ಸು ನಿಲ್ದಾಣದಿಂದ ನಿತ್ಯವೂ ಇಲ್ಲಿಗೆ ಹಲವಾರು ಬಸ್ಸುಗಳು ಸಂಚರಿಸುವುದರಿಂದ ಇದನ್ನು ಸುಲಭವಾಗಿ ತಲುಪಬಹುದಾಗಿದೆ.ಈ ಸಚಿವಾಲಯದ ವಿಶೇಷತೆಯೆಂದರೆ, ಇದು ನೋಡಲು ಆಧುನಿಕವಾಗಿ ಕಂಡರೂ ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯನ್ನು ಇಲ್ಲಿ ಕಾಣಬಹುದು. ಇದನ್ನು 8 ಎಕರೆ ಪ್ರದೇಶದಲ್ಲಿ ಕಟ್ಟಲಾಗಿದ್ದು ಒಟ್ಟಾರೆಯಾಗಿ 58,274 ಚ.ಮೀ ವಿಸ್ತೀರ್ಣವನ್ನು ಹೊಂದಿದೆ. ಈ ಕಟ್ಟಡದ ಅಂದಾಜು ವೆಚ್ಚವು 150 ಕೋಟಿ ರೂಪಾಯಿಗಳಾಗಿದೆ. ಎಂಟು ಮಹಡಿಗಳುಳ್ಳ ಈ ಕಟ್ಟಡದಲ್ಲಿ 15 ಸಭಾಭವನಗಳಿದ್ದು, 350ಕ್ಕೂ ಅಧಿಕ ಕೊಠಡಿಗಳಿವೆ. ಇದರ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಹಲವು ವರ್ಷಗಳು ಬೇಕಾದವು. ಇದರ ಒಳಾಂಗಣವು ಅದ್ಭುತವಾದ ಕಟ್ಟಿಗೆಯ ವಿನ್ಯಾಸ ಹೊಂದಿದ್ದು, ಅಲಂಕಾರಿತ ಕಲ್ಲುಗಳಿಂದ ಹೊರಗೋಡೆಗಳು ನಿರ್ಮಾಣವಾಗಿವೆ. ಈ ಕಟ್ಟಡವು ದೇಶದ ಬೇರಾವ ಸಚಿವಾಲಯವೂ ಕಾಣದ ಅತ್ಯಾಧುನಿಕ ಮತ್ತು ಸದಭಿರುಚಿಯ ಸೌಲಭ್ಯಗಳನ್ನು ಒಳಗೊಂಡಿದೆ.ಕಟ್ಟಡವು ತನ್ನ ಮೂರು ಮಹಡಿಗಳಲ್ಲಿ 600 ಕಾರುಗಳನ್ನು ನಿಲ್ಲಿಸಬಹುದಾದ ಸಾಮರ್ಥ್ಯ ಹೊಂದಿದೆ. ಸರ್ಕಾರವು ಇದಕ್ಕೆ ಉಚ್ಛಮಟ್ಟದ ರಕ್ಷಣಾ ವ್ಯವಸ್ಥೆಯನ್ನು ಕೈಗೊಂಡಿದೆ. ಆಧುನಿಕ ವಾಸ್ತುಶಿಲ್ಪ,ಸದಭಿರುಚಿಯ ಒಳಾಂಗಣ ವಿನ್ಯಾಸ, ವಿಸ್ತಾರವಾದ ರಕ್ಷಣಾ ವ್ಯವಸ್ಥೆ ಹೊಂದಿರುವ ಈ ಕಟ್ಟಡವು ಪರಿಸರ ಸ್ನೇಹಿ ಕೂಡಾ ಹೌದು. ಇದಕ್ಕುದಾಹರಣೆಯಾಗಿ ಸೋಲಾರ್ ಅಧಾರಿತ ಶಕ್ತಿ (ಪಾವರ್) ವ್ಯವಸ್ಥೆ, ಮಳೆನೀರು ಶೇಖರಣೆ ವ್ಯವಸ್ಥೆಗಳನ್ನು ಇಲ್ಲಿ ಕಾಣಬಹುದಾಗಿದೆ.ಆದ್ದರಿಂದ, ಸ್ವಲ್ಪ ಕಾಲವಾದರೂ ಸರಿ ಈ ಆಧುನಿಕ ಭವನದ ಭೇಟಿಯು, ನಿಮ್ಮ ಕಣ್ಣುಗಳಿಗೆ ಖಂಡಿತವಾಗಿಯೂ ನೀರಾಸೆಯನ್ನುಂಟು ಮಾಡದೆ ಬದಲಿಗೆ ಆನಂದಭರಿತವನ್ನಾಗಿ ಮಾಡುತ್ತದೆ.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri