82 ಎಕರೆ ಪ್ರದೇಶದಲ್ಲಿ ಹರಡಿರುವ ವಂಡರ್ಲಾ ಒಂದು ವಿನೋದಭರಿತ ಉದ್ಯಾನವನವಾಗಿದ್ದು ಬೆಂಗಳೂರಿನಿಂದ 28 ಕಿ.ಮೀ. ದೂರದಲ್ಲಿ ಬಿಡದಿಯ ಹತ್ತಿರವಿದೆ. ವಿ-ಗಾರ್ಡ್ ಗ್ರೂಪ್ ಇದರ ಮೂಲಕರ್ತ. ಇದನ್ನು ತಲುಪಲು ಬೆಂಗಳೂರು-ಮೈಸೂರು ಮಧ್ಯದ ಚತುಷ್ಪಥದ ರಸ್ತೆಯ ಮೂಲಕ 1 ಘಂಟೆ ಬೇಕಾಗುತ್ತದೆ. ಇಲ್ಲಿ 53 ಭೂ ಹಾಗು ನೀರಿನಲ್ಲಿ ಚಲಿಸುವ ಸವಾರಿಗಳಿವೆ. ಸಂಗೀತ ಕಾರಂಜಿ, ಲೇಸರ್ ಶೊ, ವರ್ಚ್ಯುವಲ್ ರಿಯಾಲಿಟಿ ಶೊ, ವಿದ್ಯುನ್ಮಾನ ಚಾಲಿತ ಮಳೆಗೆರೆವ ನೃತ್ಯ ಅಂಗಳ ಮುಂತಾದವುಗಳನ್ನು ಈ ಉದ್ಯಾನವನದಲ್ಲಿ ಕಾಣಬಹುದಾಗಿದೆ. 1150 ಜನಸಾಮರ್ಥ್ಯವುಳ್ಳ 5 ಉಪಹಾರಗೃಹಗಳಿದ್ದು, 1000 ಜನರು ಸಭೆ ನಡೆಸುವ ಸೌಲಭ್ಯಗಳಿವೆ ಮತ್ತು ಲಾಕರ್ ಕೊಠಡಿಗಳ ವ್ಯವಸ್ಥೆಯಿದ್ದು 2350 ಲಾಕರ್ ಗಳಿವೆ. ಈ ಉದ್ಯಾನವನವು ಒ.ಎಚ.ಎಸ.ಎ.ಎಸ 18001:2007 ರಕ್ಷಣಾ ಗುಣಮಟ್ಟದ ವ್ಯವಸ್ಥೆಯನ್ನೊಳಗೊಂಡ ಕೇವಲ ಎರಡೇ ಎರಡು ಉದ್ಯಾನವನಗಳಲ್ಲಿ ಒಂದಾಗಿದೆ. ನೀರಿನ ಗುಣಮಟ್ಟ ನಿಯಂತ್ರಣ ಪ್ರಯೋಗಶಾಲೆಯ ನಿಗ್ರಾಣಿಯಲ್ಲಿ ಪರೀಕ್ಷಿಸಲಾದ ಶುದ್ಧ ನೀರಿಗೆ ಬದಲಾಯಿಸಲ್ಪಡುವ 5 ನೀರು ಶುದ್ಧೀಕರಣ ಘಟಕಗಳು ಇಲ್ಲಿವೆ. ಸಾಲುಸಾಲಾದ ಮರಗಳು, ಮಳೆನೀರಿನ ಶೇಖರಣೆ ಮತ್ತು ಬಳಕೆ ಇಲ್ಲಿಯ ಪರಿಸರ ವ್ಯವಸ್ಥೆಗೆ ಬಹಳ ಸಹಕಾರಿಯಾಗಿವೆ. ಇನ್ನೂ ನೀವು ನಿಮ್ಮ ಸುರಕ್ಷತೆಯ ಬಗ್ಗೆ ಸಂಶಯ ಹೊಂದಿದ್ದರೆ, ಅದು ಅಲ್ಲಿಗೆ ಹೋಗುವವರೆಗೆ ಮಾತ್ರವಿದ್ದು ತದನಂತರ ಈ ಉದ್ಯಾನವನವು ನಿಮ್ಮ ಭರವಸೆಯನ್ನು ಖಂಡಿತವಾಗಿಯು ಗೆಲ್ಲುತ್ತದೆ.