Search
  • Follow NativePlanet
Share
ಮುಖಪುಟ » ಸ್ಥಳಗಳು » ಬೆಂಗಳೂರು » ಆಕರ್ಷಣೆಗಳು » ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್

ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್, ಬೆಂಗಳೂರು

2

ಬೆಂಗಳೂರಿನ ಐ.ಐ.ಎಸ್ ಸಿ ಯು ಉನ್ನತಮಟ್ಟದ ವಿದ್ಯಾಭ್ಯಾಸಕ್ಕೆ, ಉತ್ಕೃಷ್ಟವಾಗಿದ್ದು 1909 ರಲ್ಲಿ ಸ್ಥಾಪನೆಯಾಯಿತು. ಇದು ಬೆಂಗಳೂರಿನ ಉತ್ತರ ಭಾಗದಲ್ಲಿದ್ದು, ಮುಖ್ಯ ರೈಲು ನಿಲ್ದಾಣದಿಂದ 4 ಕಿ.ಮೀ. ದೂರದಲ್ಲಿದೆ. ಈ ಸಂಸ್ಥೆಯ ಸ್ಥಾಪನೆಯು ಕುತೂಹಲಕಾರಿಯಾದ ಇತಿಹಾಸವನ್ನು ಹೊಂದಿದೆ. 1892 ರಲ್ಲಿ ಜಮ್ ಸೇಠಜಿ ಮತ್ತು ಸ್ವಾಮಿ ವಿವೇಕಾನಂದರ ಮಧ್ಯೆ ನಡೆದಂತಹ ಸಹಜ ಮಾತುಕತೆಯಲ್ಲಿ ಇದರ ಯೊಚನೆ ಮೂಡಿ ಬಂದಿತು. ಮುಂದೆ 1909 ರಲ್ಲಿ ಮೈಸೂರಿನ ಮಹಾರಾಜರಿಂದ ಇದರ ಶಂಖು ಸ್ಥಾಪನೆ ನೆರವೇರಿಸಲಾಯಿತು. ಇಲ್ಲಿ ಒಟ್ಟು 40 ವಿಭಾಗಗಳಿದ್ದು, ಜಗತ್ತಿನ ಉತ್ತಮ ಮೂಲಸೌಕರ್ಯಗಳನ್ನು ಹೊಂದಿದೆ. 6 ಕ್ಯಾಂಟಿನ್ ಗಳು, ಜಿಮ್ಖಾನಾ, ಫುಟ್ ಬಾಲ ಮತ್ತು ಕ್ರಿಕೇಟ್ ಮೈದಾನ, ಹೋಟೆಲ್ ಗಳು, ಮಹಿಳೆ ಹಾಗು ಪುರುಷ ಹೊಸ್ಟೆಲ್ ಗಳನ್ನು ಇದು ಒಳಗೊಂಡಿದೆ. ಇಷ್ಟೇ ಅಲ್ಲದೆ ಈ ಸಂಸ್ಥೆಯ ಆವರಣವು ತನ್ನ ಉದ್ಯೋಗಿಗಳಿಗೆ ವಸತಿಗೃಹಗಳು, ಗ್ರಂಥಾಲಯಗಳು, ಶಾಪಿಂಗ್ ಕೇಂದ್ರಗಳು ಹಾಗು ಮಸಾಜ್ ಪಾರ್ಲರ್ ಗಳನ್ನು ಹೊಂದಿದೆ. ಇಲ್ಲಿ ದೇಸಿಯ ಮತ್ತು ವಿದೇಶಿಯ ಸಸ್ಯರಾಶಿಗಳ ಬೃಹತ ಸಂಗ್ರಹವಿದ್ದು ನೋಡಲು ಅದ್ಭುತವಾಗಿದೆ. ಕಟ್ಟಡವು ಶಾಸ್ತ್ರೀಯ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಸಂಸ್ಥೆಯು ಕೊಡುವ ಪದವಿಗಳನ್ನು ಎರಡು ವಿಭಾಗದಲ್ಲಿ ವಿಂಗಡಿಸಬಹುದಾಗಿದ್ದು ಒಂದು ಸಂಶೋಧನೆಗೆ ಕೊಡುವ ಪಿ.ಹೆಚ.ಡಿ ಮತ್ತು ಎಂ.ಎಸ್ ಪದವಿಗಳು. ಇನ್ನೊಂದು ಎಂ.ಇ ಹಾಗು ಎಂ.ಬಿ.ಎ ಪದವಿಗಳು ಎಂದು ಹೇಳಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon