ಐತಿಹಾಸಿಕ ಮತ್ತು ಪುರಾತತ್ವ ಪ್ರಾಮುಖ್ಯತೆಯನ್ನು ಹೊಂದಿರುವ ಸೈಂತಲ ಬಲಂಗೀರ್ ನಿಂದ 35 ಕಿ ಮೀ ಅಂತರದಲ್ಲಿದೆ. ಈ ಸ್ಥಳವು ಚಂಡಿ ದೇವಿಯು ಮಹಿಷಾಸುರಮರ್ಧಿನಿ ಅವತಾರದಲ್ಲಿರುವ ರೂಪದಂತಿರುವ ಮಾ ಚಂಡೇಶ್ವರಿ ತಕುರಾನಿ ದೇವಾಲಯಕ್ಕೆ ಪ್ರಸಿದ್ದಿ ಪಡೆದಿದೆ. ಸೋಮವಂಶಿ ಕಾಲಕ್ಕೆ ಸೇರಿದ ದೇವಾಲಯ ಇದು ಎಂದು ಹೇಳಲಾಗುತ್ತದೆ. ದೇವಾಲಯದ ಬಾಗಿಲಲ್ಲಿ ವಿಷ್ಣುವಿನ ಹತ್ತು ಅವತಾರ ಅಂದರೆ ದಶಾವತಾರ ಮತ್ತು ಗಂಗಾ, ಯಮುನಾ ಚಿತ್ರವನ್ನು ಕೆತ್ತಲಾಗಿದೆ.
ಸೈಂತಲದಲ್ಲಿ ಎಲ್ಲಾ ರೀತಿಯ ಹಬ್ಬಗಳಾದ ರಥ ಯಾತ್ರ, ಸಾವಿತ್ರಿ ವೃತ, ದುರ್ಗಾ ಪೂಜೆ, ಗಜ ಲಕ್ಷ್ಮಿ ಪೂಜಾ, ಮಕರ ಸಂಕ್ರಾಂತಿ, ಹೋಳಿ, ಮನಬಸ ಗುರುಬರ್, ರಕ್ಷಾ ಬಂಧನ, ಬಿಶುಬ, ಕಾರ್ತಿಕ ಪೂರ್ಣಿಮ, ಜನ್ಮಾಷ್ಟಮಿ, ಗಣೇಶ ಪೂಜೆ, ರಾಮನವಮಿ, ಸರಸ್ವತಿ ಪೂಜೆ ಮುಂತಾದವುಗಳನ್ನು ಆಚರಿಸುತ್ತಾರೆ. ನವರಾತ್ರಿಯ ದುರ್ಗಾ ಪೂಜೆ ಸೈಂತಲ ದ ವಿಶಿಷ್ಟ ಪೂಜೆಯಾಗಿದೆ. ಇದನ್ನು ಒಂಬತ್ತು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಅಷ್ಟಮಿ ದಿನ ಅಥವಾ ಎಂಟನೇ ದಿನ ಭಾಯಿ ಜುಂತಿಯ ವನ್ನು ಆಚರಿಸಲಾಗುತ್ತದೆ. ಸೈಂತಲ ಪ್ರವಾಸವನ್ನು ಈ ಹಬ್ಬಗಳ ಸಂದರ್ಭದಲ್ಲಿ ಮಾಡಬೇಕು.


Click it and Unblock the Notifications