Search
  • Follow NativePlanet
Share
ಮುಖಪುಟ » ಸ್ಥಳಗಳು » ಬಲಂಗೀರ್ » ಹವಾಮಾನ

ಬಲಂಗೀರ್ ಹವಾಮಾನ

ಅಕ್ಟೋಬರ್ ನಿಂದ ಫೆಬ್ರವರಿ ವರೆಗೆ ಇರುವ ಚಳಿಗಾಲದಲ್ಲಿ ಬಲಂಗೀರ್ ಪ್ರವಾಸ ಕೈಗೊಳ್ಳುವುದು ಉತ್ತಮ. ಈ ಸಮಯದಲ್ಲಿ ವಾತಾವರಣ ತಂಪಾಗಿದ್ದು, ದಿನದ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ.

ಬೇಸಿಗೆಗಾಲ

ಬಲಂಗೀರ್ ಬೆಸಿಗೆ ಕಾಲದಲ್ಲಿ ಅತಿ ಹೆಚ್ಚು ಉಷ್ಣಾಂಶ ಹೊಂದಿದ್ದು 46 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುತ್ತದೆ. ಈ ಕಾರಣದಿಂದಾಗಿ ಪ್ರವಾಸಿಗರು ಬೇಸಿಗೆಯಲ್ಲಿ ಇಲ್ಲಿ ಬರುವುದು ಸೂಕ್ತವಲ್ಲ. ಮಾರ್ಚ ನಿಂದ ಮೇ ಇಲ್ಲಿ ಬೇಸಿಗೆ ಕಾಲ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ಬಲಂಗೀರ್ ನಲ್ಲಿ ಮಳೆಗಾಲ. ಆದಾಗ್ಯೂ ಅಕ್ಟೋಬರ್ ನಲ್ಲಿ ಕೂಡ ಮಳೆ ಬರುವ ಸಾಧ್ಯತೆ ಇದೆ. ಧಗೆಯ ಬೇಸಿಗೆಯ ನಂತರದ ಮಳೆ ಆಹ್ಲಾದಕರ ಎನಿಸುತ್ತದೆ. ಬಲಂಗೀರ್ ನಲ್ಲಿ ಹದವಾದ ಮಳೆಯಿಂದ ಅತಿ ಹೆಚ್ಚು ಮಳೆ ಕೂಡ ಸಂಭವಿಸುತ್ತದೆ. ವರ್ಷದಲ್ಲಿ 1216 ಮಿ ಮೀ, ಮಳೆ ಸಂಭವಿಸುತ್ತದೆ.

ಚಳಿಗಾಲ

ಚಳಿಗಾಲ ಇಲ್ಲಿ ಸ್ವಲ್ಪ ಚಳಿಯಿಂದ ಕೂಡಿರುತ್ತದೆ. ಅಕ್ಟೋಬರ್ ಕೊನೆಯ ವಾರದಲ್ಲಿ ನಿಧಾನವಾಗಿ ಪ್ರಾರಂಭವಾಗುವ ಚಳಿ ಫೆಬ್ರವರಿ ವರೆಗೆ ಮುಂದುವರೆಯುತ್ತದೆ. ಈ ಸಮಯದಲ್ಲಿ 3 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಕಡಿಮೆಯಾಗುತ್ತದೆ. ಬಲಂಗೀರ್ ಗೆ ಪ್ರವಾಸ ಕೈಗೊಳ್ಳಲು ಚಳಿಗಾಲ ಸೂಕ್ತ ಕಾಲ.