ಬಲಂಗೀರ್ ಜಿಲ್ಲಾ ಕೇಂದ್ರದಿಂದ 40 ಕಿ ಮೀ ಅಂತರದಲ್ಲಿ ಈ ಪತ್ನಾಗರ್ ಪ್ರದೇಶವಿದೆ. ಈ ಪ್ರದೇಶದಲ್ಲಿ ಕೆಲವು ಹಳೆಯ ದೇವಾಲಯಗಳಿವೆ. ಇಲ್ಲಿರುವ ಪರಮೇಶ್ವರಿ ದೇವಾಲಯ ಚಾಲುಕ್ಯರ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ. ಮುಖ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ಸೋಮೇಶ್ವರ ಶಿವ ದೇವಾಲಯವು 12 ನೇ ಶತಮಾನದ ದೇವಾಲಯವಾಗಿದೆ. ಪತ್ನಾಗರ್ ನಲ್ಲಿ ಅಧಪತನದಲ್ಲಿ ಇರುವ ಸಾಕಷ್ಟು ದೇವಾಲಯಗಳನ್ನು ಕಾಣಬಹುದು.
ಇವುಗಳಲ್ಲಿ ಹೆಚ್ಚಿನವುಗಳನ್ನು ಚೌಹಾಣರು ಪಶ್ಚಿಮ ಒಡಿಶಾವನ್ನು ಆಳುವ ಸಂದರ್ಭದಲ್ಲಿ ಕಟ್ಟಿದ್ದು ಎನ್ನಲಾಗಿದೆ. ಬಲಂಗೀರ್ ನ ಇತಿಹಾಸವನ್ನು ತಿಳಿದುಕೊಳ್ಳಲು ಪತ್ನಾಗರ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.ಈ ಸ್ಥಳವು ಇಂದಿಗೂ ಕೂಡ ಹಿಂದಿನ ರಾಜವೈಭಾವವನ್ನು ಕಾಪಾಡಿಕೊಂಡು ಬರುತ್ತಿದೆ. ಪ್ರತಿವರ್ಷ ಸಾಕಷ್ಟು ಪುರಾತತ್ವ ಶಾಸ್ತ್ರದ ವಿದ್ಯಾರ್ಥಿಗಳು ಮತ್ತು ಇತಿಹಾಸಕಾರರು ಇಲ್ಲಿಗೆ ಭೇಟಿ ನೀಡುತ್ತಾರೆ.