ಬಲಂಗೀರ್ ನಿಂದ 104 ಕಿ ಮೀ ಅಂತರದಲ್ಲಿರುವ ಜಾರಿಯಲ್ ಮತ್ತು ರಾಣಿಪುರ್ ಇವುಗಳು ಅವಳಿ ಹಳ್ಳಿಗಳು. ಪುರಾತನ ಕಾಲದಲ್ಲಿ ಪಾತ್ನಾಗರ್ ನ ರಾಣಿಯರು ರಾಣಿಪುರದಲ್ಲಿ ವಾಸಿಸುತ್ತಿದ್ದರು ಮತ್ತು ಜಾರಿಯಲ್ ನಲ್ಲಿ ಕೋಟೆಗಳು ಇದ್ದವು. ಈ ಸ್ಥಳ ವಿವಿಧ ಜನಾಂಗದ ಧಾರ್ಮಿಕ ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ವೈಷ್ಣವ, ಶೈವ, ಬೌದ್ಧ ಮತ್ತು ತಂತ್ರಶಾಸ್ತ್ರ ಗಳು ಅಭಿವೃದ್ಧಿ ಹೊಂದಿದ್ದವು. ಟಾಂಗ್ ನದಿ ಅಥವಾ ಟಾಂಗ್ ಜೋರ್ ಈ ತಪ್ಪಲಿನಲ್ಲಿಯೇ ಹರಿಯುತ್ತದೆ.
ರಾಣಿಪುರ್ ಮತ್ತು ಜಾರಿಯಲ್ ನ ಸುತ್ತಮುತ್ತ ಪತ್ನಾಗರ್ ಮರಗುಡ, ಅಸುರ್ಗದ, ನರಿಸಿಂಗನಾಥ್ ಮತ್ತು ಸೈಂಥಾಲ ಪದೋಗದ್, ಬೆಲ್ಖಂಡಿ ಇನ್ನು ಮುಂತಾದ ಐತಿಹಾಸಿಕ ಸ್ಥಳಗಳಿವೆ. ದಕ್ಷಿಣ ಕೋಶಲದ ಸೋಮವಂಶಿ ರಾಜರು ನಿರ್ಮಿಸಿದ ಸಾಕಷ್ಟು ದೇವಾಲಯಗಳು ಇಲ್ಲಿವೆ. ಇವುಗಳೆಲ್ಲ 9 ಮತ್ತು 10 ನೇ ಶತಮಾನದವು ಎನ್ನಲಾಗಿದೆ. ಇತಿಹಾಸಕಾರರ ಪ್ರಕಾರ ಈ ಸ್ಥಳದಲ್ಲಿ ಒಂದು ಮೈಲು ಉದ್ದದಲ್ಲಿ ಮತ್ತು ಒಂದು ನಾಲ್ಕನೇ ಅರ್ಧ ಮೈಲಿಗೆ ಒಂದೊಂದು ದೇವಸ್ಥಾನದಂತೆ 200 ಕ್ಕೂ ಹೆಚ್ಚು ದೇವಸ್ಥಾನಗಳಿದ್ದವು.
ರಾಣಿಪುರ ಮತ್ತು ಜಾರಿಯಾಲ್ ನಲ್ಲಿ ಛಾವಣಿ ಇಲ್ಲದ ದೇವಾಲಯಗಳು ಹೆಚ್ಚಾಗಿ ಕಂಡು ಬರುತ್ತವೆ. 64 ಯೋಗಿನಿಯರಿಗೆ ಎಂದು ಪ್ರತ್ಯೇಕ ಮನೆ ಮತ್ತು ದೇವಾಲಯ ಕೂಡ ಕಟ್ಟಲಾಗಿದೆ. ಈ ಸ್ಥಳದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಮಮ್ಮಯೂರ ಶಿವಾಚಾರ್ಯ ಗಗನ ಶಿವ ನಿರ್ಮಿಸಿದ ಸೋಮೇಶ್ವರ ಶಿವ ದೇವಾಲಯ. ಒಡಿಶಾದಲ್ಲೇ ಅತ್ಯಂತ ಎತ್ತರದ ಇಟ್ಟಿಗೆಯ ದೇವಾಲಯವಾದ ಇಂದ್ರಲತಾ ದೇವಾಲಯ ಕೂಡ ಇಲ್ಲಿದೆ.


Click it and Unblock the Notifications