ಬಾಗಾ ಬೀಚ್ ನಲ್ಲಿಯ ಸುಪ್ರಸಿದ್ಧವಾದ ಬ್ರಿಟ್ಟೋಸ್ ನಿಂದ ಕೆಲವೆ ಕಾಲ್ಹೆಜ್ಜೆಯ ದೂರದಲ್ಲಿ ಸೇಂಟ್ ಅಂಥೋನೀಸ್ ಕಾರಾವೊಕೆ ಶ್ಯಾಕ್ ಇದೆ. ಕಳೆದ ಕೆಲವು ಕಾಲದಿಂದ ಅಷ್ಟೆನು ಹೆಸರುವಾಸಿಯಾಗಿರದ ಈ ಶ್ಯಾಕ್ ಇತ್ತಿತ್ತಲಾಗಿ ಜನರನ್ನು ಗುಂಪುಗಳಲ್ಲಿ ಆಕರ್ಷಿಸುತ್ತ ಪ್ರಸಿದ್ಧವಾಗುತ್ತಿದೆ.ಇದೊಂದು ದೊಡ್ಡದಾದ ಶ್ಯಾಕ್ ಆಗಿದ್ದು ಒಳಾಂಗಣ ಕೊಠಡಿ ಮತ್ತು ಸಮುದ್ರ ತೀರದ ದೃಶ್ಯ ಆನಂದಿಸಲು ಬೀಚ್ ಟಾಪ್ ನ್ನು ಹೊಂದಿದೆ. ಇಲ್ಲಿಯ ಒಳಾಂಗಣ ಕೊಠಡಿಯ ವಿಶೇಷವೆಂದರೆ ಪಾರ್ಟಿ ಪ್ರಿಯ ಜನರು, ಕಾರಾವೊಕೆ ಸೆಷನ್ ನಲ್ಲಿ ಹಳೆಯ ಅಂದರೆ ಸುಮಾರು 60, 70 ರ ದಶಕದ ಹಾಡುಗಳನ್ನು ಹಾಡುತ್ತ ಮೈಮರೆತಿರುತ್ತಾರೆ. ಈ ಶ್ಯಾಕ್ ಇಲ್ಲಿ ದೊರೆಯುವ ಖಾದ್ಯಗಳಿಗೂ ಕೂಡ ಜನಪ್ರಿಯವಾಗಿದ್ದು ಅದರಲ್ಲೂ ವಿಶೀಷ್ಟವಾಗಿರುವ ಫಿಷ್ ಕರ್ರಿಗಳಿಗೆ ಖ್ಯಾತಿಯಾಗಿದೆ. ಡ್ರಿಂಕ್ಸ್ ಹಾಗು ಹುಕ್ಕಾಗಳು ಲಭ್ಯವಿದ್ದು, ಪಕ್ಕದಲ್ಲಿರುವ ಬ್ರಿಟ್ಟೋಸ್ ಗೆ ಹೋಲಿಸಿದರೆ, ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.ಇನ್ನು ಡ್ರಿಂಕ್ಸ್ ಹಾಗು ಸಂಗೀತವನ್ನು ಆನಂದಿಸಲೆಂದೇ ಬಂದವರಿಗೆ ವಿಶೇಷವಾಗಿ ಟೇಬಲ್ ಜೊತೆಗೆ ದೊಡ್ಡದಾದ ಬಾರ್ ಕೂಡ ಇದೆ. ಸೇಂಟ್ ಅಂಥೋನೀಸ್ ಕಾರಾವೊಕೆ ಶ್ಯಾಕ್ ಗೆ ತಲುಪುವುದು ತುಂಬಾ ಸರಳ. ಕ್ಯಾಬ್ ಮುಖಾಂತರ ನೀವು ಬಾಗಾದಲ್ಲಿರುವ ಬ್ರಿಟ್ಟೋಸ್ ಗೆ ಬಂದರೆ ಸಾಕು, ಅಲ್ಲಿಂದ ಯಾರಿಗಾದರೂ ಮಾರ್ಗವನ್ನು ವಿಚಾರಿಸುತ್ತ ಇಲ್ಲಿಗೆ ಬರಬಹುದಾಗಿದೆ. ಇಲ್ಲವಾದಲ್ಲಿ ಬಾಗಾದ ಟಿಟೋಸ್ ಲೇನ್ ನಲ್ಲಿ ಉತ್ತರಾಭಿಮುಖವಾಗಿ ಮುಂದೆ ಸಾಗಿದರೆ ನೀವು ಬ್ರಿಟ್ಟೋಸ್ ಗೆ ತಲುಪಿ ಅಲ್ಲಿಂದ ಸುಲಭವಾಗಿ ಸೇಂಟ್ ಅಂಥೋನೀಸ್ ಕಾರಾವೊಕೆ ಶ್ಯಾಕ್ ಗೆ ಬರಬಹುದು.


Click it and Unblock the Notifications