ಷಾ ಗಂಜ್ ಮಸೀದಿಯು ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವ ಗುಣಗಳನ್ನು ಹೊಂದಿದೆ. ಔರಂಗಬಾದ್ ನಲ್ಲಿರುವ ಈ ಮಸೀದಿಯು ಒಂದು ಎತ್ತರವಾದ ಪೀಠದ ಮೇಲೆ ನಿಂತಿದೆ. ಇದರ ಮೂರು ಕಡೆ ಅಂಗಡಿ ಮುಂಗಟ್ಟುಗಳು ಇವೆ. ಇನ್ನೊಂದು ಕಡೆ ಏರಲು ಮೆಟ್ಟಿಲುಗಳು ಇವೆ.
ಮಸೀದಿಯು ಇಂಡೋ- ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯಲ್ಲಿದೆ. ಇದರ ಒಳಾಂಗಣದಲ್ಲಿ 24 ಸ್ತಂಭಗಳನ್ನು ಕಾಣಬಹುದಾಗಿದೆ. ಇವುಗಳಲ್ಲಿ ಆರು ಸ್ತಂಭಗಳು ಚೌಕಾಕರವಾದ ಆಕಾರದಲ್ಲಿದೆ.
ಮುಖ್ಯ ಪ್ರಾಂಗಣದ ಮುಂಭಾಗದಲ್ಲಿ ಎರಡು ಬೃಹತ್ ನೀರಿನ ಟ್ಯಾಂಕ್ ಗಳಿವೆ. ಇದರ ಪ್ರವೇಶ ದ್ವಾರವು ಒಂದು ಸಣ್ಣ ಮಸೀದಿಯನ್ನು ಹೋಲುತ್ತಿದ್ದು, ಎರಡು ಸ್ತಂಭ ಮತ್ತು ಕಮಾನಿನಾಕಾರದ ದ್ವಾರವನ್ನು ಹೊಂದಿದೆ.