ಅಮೃತಸರದ ಚೌಕ್ ಮೋನಿ ಬಜಾರ್ದಲ್ಲಿ ಶ್ರೀ ಶ್ರೀ ರಾಧಾಕೃಷ್ಣ ಟೆಂಪಲ್ ಎಂದೂ ಕರೆಯಲಾಗುವ ಇಸ್ಕಾನ್ ಮಂದರವಿದೆ. 2011ರಲ್ಲಿ ಸ್ಥಾಪಿತವಾದ ಈ ಮೋಹಕ ಮಂದಿರ ವಿಶ್ವದೆಲ್ಲೆಡೆ ಇರುವ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ಮಂದಿರಗಳಲ್ಲಿ ಒಂದು. ಇದನ್ನು ಹರೇ ಕೃಷ್ಣ ಮೂವ್ಮೆಂಟ್ ಎಂದೂ ಕರೆಯುತ್ತಾರೆ. ಇಸ್ಕಾನ್ ಒಂದು ಲಾಭರಹಿತ, ಶೈಕ್ಷಣಿಕ ಗೌಡಿಯಾ ವೈಷ್ಣವ ಧಾರ್ಮಿಕ ಸಂಸ್ಥೆ. ಶ್ರೀ ಚೈತನ್ಯ ಮಹಾಪ್ರಭುಗಳ ಸಂಕೀರ್ತನ ಆಂದೋಲನವನ್ನು ವಿಶ್ವದ ಪ್ರತಿಯೊಂದು ಹಳ್ಳಿ ಹಾಗು ಪಟ್ಟಣದಲ್ಲಿ ಲಭ್ಯವಿರುವಂತೆ ಮಾಡುವುದೇ ಈ ಸಂಸ್ಥೆಯ ಮೂಲ ಉದ್ದೇಶ.


Click it and Unblock the Notifications