Search
  • Follow NativePlanet
Share
ಮುಖಪುಟ » ಸ್ಥಳಗಳು » ಅಮೃತಸರ್ » ಆಕರ್ಷಣೆಗಳು » ಗುರುದ್ವಾರ ಸಂತೋಖಸರ ಸಾಹೀಬ್

ಗುರುದ್ವಾರ ಸಂತೋಖಸರ ಸಾಹೀಬ್, ಅಮೃತಸರ್

2

ಗುರುದ್ವಾರಾ ಸಂತೋಖಸರ ಸಾಹೀಬ್ ಹರಮಂದಿರ ಸಾಹೀಬ್ ಪಕ್ಕದಲ್ಲಿಯೇ ಇದೆ. ಗುರು ಅರ್ಜುನ್ ದೇವ್‌ಜಿ ಕಟ್ಟಿಸಿದ ಐದು ಪವಿತ್ರ ತೀರ್ಥಗಳಲ್ಲಿ ಒಂದನ್ನು ಐತಿಹಾಸಿಕ ಸಿಖ್‌ರ ಮಂದಿರ ಒಳಗೊಂಡಿದೆ. ಈ ಪವಿತ್ರ ಸರೋವರವನ್ನು ಅಗೆಯುವ ಕೆಲಸವನ್ನು ಶುರು ಮಾಡಿದವರು ಗುರು ರಾಮದಾಸಜಿ ಅವರು. ಆ ಕೆಲಸವನ್ನು ಅವರು ತಮ್ಮ ಮಾವ ಮತ್ತು ಆಗಿನ ಸಿಖ್ ಗುರುವಾಗಿದ್ದ ಗುರು ಅಮರದಾಸಜಿಯ ಆದೇಶದ ಮೇರೆಗೆ ಮಾಡಿದರು. ಗುರು ಅರ್ಜುನ್ ದೇವಜಿ ಸ್ನಾನದ ಈ ಕೊಳ ಅಗೆಯುವ ಕೆಲಸವನ್ನು 1587 ಹಾಗು 1589ರ ಅವಧಿಯಲ್ಲಿ ಬಾಬಾ ಬುದ್ಧರ ಸಹಾಯದಿಂದ ಮುಕ್ತಾಯಗೊಳಿಸಿದರು.

ಹೀಗೆ ಕೊಳ ಅಗೆಯುವ ಕೆಲಸ ನಡೆಯುತ್ತಿರಬೇಕಾದರೆ ಒಬ್ಬ ಸಂತ ಧ್ಯಾನ ಮಾಡುತ್ತಾ ಕುಳಿತಿರುವುದನ್ನು ಈ ಸ್ಥಳದಲ್ಲಿಯೇ ಕಂಡುಬಂದಿತಂತೆ. 'ಸಂತಖ' ಎಂಬ ಈ ಯೋಗಿ ತಾನು ಮೋಕ್ಷವನ್ನು ಪಡೆಯಲು ತನ್ನ ಗುರುವಿಗಾಗಿ ಕಾಯುತ್ತಿರುವುದಾಗಿ ಹೇಳಿ ಕೊನೆಯುಸಿರೆಳೆದನಂತೆ. ಹೀಗಾಗಿ ಈ ಸಂತನ ನಂತರ ಈ ಮಂದಿರವನ್ನು ಗುರು ರಾಮದಾಸಜಿಯವರು ಹೆಸರಿಸಿದ್ದಾರೆ. ಗುರುದ್ವಾರ ತಹಲಿ ಸಾಹೀಬ್ ಎಂತಲೂ ಇದನ್ನು ಕರೆಯುತ್ತಾರೆ. ಈ ಐತಿಹಾಸಿಕ ಮಂದಿರಕ್ಕೆ ಭೇಟಿ ಕೊಟ್ಟರೆ ಒಳ್ಳೆಯದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat