ಗೋಲ್ಡನ್ ಟೆಂಪಲ್ ಅನ್ನು ಶ್ರೀ ಹರಮಂದಿರ ಸಾಹೀಬ್ ಎಂತಲೂ ಕರೆಯುತ್ತಾರೆ. ವರ್ಷವಿಡೀ ಕೋಟ್ಯಂತರ ಭಕ್ತರು ಭೇಟಿ ನೀಡುವ ಪ್ರಮುಖ ಸ್ಥಳ ಇದಾಗಿದೆ. ಅಮೃತರಸದಲ್ಲಿ ಉಪಸ್ಥಿತವಿರುವ ಈ ಪವಿತ್ರ ಕ್ಷೇತ್ರದಲ್ಲಿ ಸಿಖ್ ಸಮುದಾಯದ 5ನೇ ಗುರು ಅರ್ಜುನ್ ದೇವಜೀ 16ನೇ ಶತಮಾನದಲ್ಲಿ ಗುರುದ್ವಾರ ಕಟ್ಟಿಸಿದರು. 19ನೇ ಶತಮಾನದ ಪ್ರಾರಂಭದಲ್ಲಿ ಮಹಾರಾಜ ರಂಜಿತ್ ಸಿಂಗ್ ಮೇಲಿನ ಅಂತಸ್ತುಗಳನ್ನು 400 ಕೆಜಿ ಬಂಗಾರದಿಂದ ಮುಚ್ಚಿದ. ಅದಕ್ಕಾಗಿ ಈ ಮಂದಿರವನ್ನು ಗೋಲ್ಡನ್ ಟೆಂಪಲ್ ಎಂದು ಕರೆಯುತ್ತಾರೆ.
ಅಮೃತಶಿಲೆಯಲ್ಲಿ ಕಟ್ಟಿಸಲಾಗಿರುವ ಎರಡು ಅಂತಸ್ತಿನ ಗುರುದ್ವಾರಾದ ಸುತ್ತಲೂ ಇರುವ ಪವಿತ್ರ ಸರೋವರವನ್ನು ಅಮೃತ ಸರೋವರ ಎಂದು ಕರೆಯುತ್ತಾರೆ. ಸಿಖ್ ಧರ್ಮೀಯರ ಪವಿತ್ರ ಗ್ರಂಥವಾದ ಆದಿ ಗ್ರಂಥವನ್ನು ಈ ಗುರುದ್ವಾರಾದಲ್ಲಿ ಇಟ್ಟಿರುತ್ತಾರೆ. ಈ ದೇಗುಲದ ನಾಲ್ಕು ದ್ವಾರಗಳು ಭ್ರಾತೃತ್ವ ಮತ್ತು ಸಮಾನತೆಯನ್ನು ಸೂಚಿಸುತ್ತವೆ. ಅಮೃತಸರಕ್ಕೆ ಭೇಟಿ ನೀಡುವ ದೇಶೀಯ ಮತ್ತು ವಿದೇಶೀಯ ಪ್ರವಾಸಿಗರಿಗೆ ಸಿಖ್‌ರ ಈ ಪವಿತ್ರ ಕ್ಷೇತ್ರ ಖಂಡಿತವಾಗಿ ನೋಡತಕ್ಕ ತಾಣವಾಗಿದೆ.


Click it and Unblock the Notifications