ಸಿಮ್ತೋಲಾ, ಕುದುರೆ ಸವಾರಿ ಪ್ರದರ್ಶನ ಸ್ಥಳದ ಎದುರು ಭಾಗದಲ್ಲಿ ಚಿತ್ರಸದೃಶವಾದ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಅಲ್ಮೋರಾದಿಂದ ಸುಮಾರು 3 ಕಿ. ಮೀ ದೂರದಲ್ಲಿ ನೆಲೆಗೊಂಡಿದೆ ಮತ್ತು ಸಮೃದ್ಧ ಹಸಿರು ಪೈನ್ ಮತ್ತು ಫರ್ ಮರಗಳಿಂದ ಸುತ್ತುವರೆದಿದೆ. ಹಿಂದಿನ ಕಾಲದಲ್ಲಿ, ಈ ಸ್ಥಳವು ಒಂದು ಗ್ರಾನೈಟ್ ಬೆಟ್ಟ ಮತ್ತು ಒಂದು ವಜ್ರದ ಗಣಿಗಾರಿಕೆಯ ಕೇಂದ್ರವಾಗಿತ್ತು. ಸ್ಥಳವು ಪೈನ್ ಮತ್ತು ದೇವದಾರು ಮರಗಳಿಂದ ಮುಚ್ಚಿದ ಪರ್ವತಗಳ ಮನಮೋಹಕ ವೀಕ್ಷಣೆಗಳನ್ನು ಒದಗಿಸುವ ಪ್ರಸಿದ್ಧ ವಿಹಾರಧಾಮವೆನಿಸಿದೆ.