ಕಾಯಂಕುಳಂ ಎಂಬ ನಗರದ ಹೆಸರನ್ನು ಈ ಸರೋವರಕ್ಕೆ ಇಡಲಾಗಿದೆ. ಇದನ್ನು ಪ್ರಾಚೀನ ಕಾಲದ ವಾಣಿಜ್ಯ ಕೇಂದ್ರ ಎಂದು ಕರೆಯಲಾಗುತ್ತದೆ. ಇದು ಅಲ್ಲೆಪ್ಪೆ ಜಿಲ್ಲೆಯಲ್ಲೆ ಬಹು ವೈಭವದಿಂದ ಕಾಣುವ ಸರೋವರ. ಇಲ್ಲಿನ ಪರಿಸರದ ಸ್ವಚ್ಚತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಸಂಚರಿಸುವ ಜಾಗವನ್ನು ಬಹಳ ಸ್ವಚ್ಥತೆಯಿಂದ ಕಾಪಾಡಿಕೊಂಡು ಬರಲಾಗಿದೆ. ಕಾಯಂಕುಳಂ ಸರೋವರವನ್ನು ಕೊಲ್ಲಮ್ ಮತ್ತು ಅಲ್ಲಪ್ಪೆ ಸರೋವರಗಳು ಸೇರಿ ಪ್ರವಾಸಿಗರಿಗೆ ಮತ್ತಷ್ಟು ಖುಷಿಯನ್ನು ಮೊಗೆದು ಉಣ್ಣಿಸುತ್ತವೆ. ನೀವು ಪರಿಸರ ಪ್ರಿಯರಾಗಿದ್ದರೆ, ಸರೋವರದಲ್ಲಿ ದೋಣಿವಿಹಾರ ಮಾಡಬೇಕೆಂದರೆ ನಿಮಗೆ ಅವಕಾಶವಿದೆ.ಬಾಡಿಗೆಗೆ ದೋಣಿಗಳೂ ಸಿಗುತ್ತವೆ. ಮುಗಿಲ ಮ್ಯದಲ್ಲಿ ತೇಲಿದ ಅನುಭವ, ನಕ್ಷತ್ರಗಳ ನಡುವೆ ಸಂಚರಿಸಿದ ಅನುಭವಗಳೂ ನಮಗೆ ಲಭ್ಯವಾಗುತ್ತದೆ. ಇಲ್ಲಿನ ಕೇರಳಾ ಶೈಲಿಯ ಊಟವೂ ನಮ್ಮನ್ನು ಹೊಸ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡುತ್ತದೆ.


Click it and Unblock the Notifications