ಕೊಲಾಬಾ ಕೋಟೆಯನ್ನು ಮುಂಬೈಯ ಜನರು ಇಷ್ಟಪಡುವ ಕೊಲಾಬಾ (Colaba) ಮಾರುಕಟ್ಟೆ ಎಂದು ಗೊಂದಲ ಮಾಡಿಕೊಳ್ಳಬೇಡಿ! ಕೊಲಾಬಾ ಕೋಟೆಯು ಅಲಿಬಾಗ್ ತೀರದ ಹತ್ತಿರದಲ್ಲಿಯೆ ಇದೆ. ಈ ಐತಿಹಾಸಿಕ ಕೋಟೆಯು ಪ್ರಸಿದ್ಧ ಮರಾಠಾ ಯೋಧ ಶಿವಾಜಿಯ ನಿಧನಕ್ಕಿಂತ ಮೊದಲು ಅವರಿಂದಲೆ ಸ್ಥಾಪಿತವಾದ ಕೊನೆಯ ಕೋಟೆಯಾಗಿದೆ.
ಕುಲಾಬಾ ಎಂತಲೂ ಕರೆಯಲಾಗುತ್ತಿದ್ದ ಕೊಲಾಬಾ ಕೋಟೆಯು ಒಂದಾನೊಂದು ಕಾಲದಲ್ಲಿ ಸಿಹಿ ನೀರಿನ ಬಾವಿಯನ್ನೂ ಹೊಂದಿತ್ತು. ಈ ಸ್ಥಳದಲ್ಲಿ ಹಲವಾರು ದೇಗುಲಗಳನ್ನು ಕಾಣಬಹುದಾಗಿದೆ. ಪ್ರವೇಶ ದ್ವಾರಗಳಲ್ಲಿ ಪ್ರವಾಸಿಗರು ಈಗಲೂ ಆನೆ ಮತ್ತು ಹುಲಿಗಳ ಕೆತ್ತನೆಯನ್ನು ಕಾಣಬಹುದು.
ಸಮುದ್ರದ ಅಲೆಗಳ ರಭಸವಿಲ್ಲದಿದ್ದಾಗ, ಅಲಿಬಾಗ್ ಕಡಲ ತೀರದಿಂದ ಈ ಕೋಟೆಯನ್ನು ತಲುಪಬಹುದಾಗಿದೆ. ಆದರೆ ಭಾರತೀಯ ಪುರಾತತ್ವ ಇಲಾಖೆಗೆ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ.


Click it and Unblock the Notifications