Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಆಕರ್ಷಣೆಗಳು » ಡಂಪಾ ವನ್ಯಜೀವಿ ಧಾಮ

ಡಂಪಾ ವನ್ಯಜೀವಿ ಧಾಮ, ಐಜಾಲ್

2

ಐಜಾಲ್ ನಿಂದ ಸುಮಾರು 130 ಕಿ.ಮೀ. ದೂರದಲ್ಲಿ ಡಂಪಾ ವನ್ಯಜೀವಿ ಧಾಮವಿದೆ. ವನ್ಯಜೀವಿ ಧಾಮ ಸುಮಾರು 550 ಚದರ ಕಿ.ಮೀ.ನಷ್ಟು ವಿಸ್ತೀರ್ಣ ಹೊಂದಿದೆ. ಶ್ರೀಮಂತ ಸಸ್ಯರಾಶಿಯಿಂದ ಇದು ಆವೃತವಾಗಿದೆ. ಬೇಸಿಗೆಯು ತಂಪಾಗಿ ಮತ್ತು ಚಳಿಗಾಲ ಹಿತಕರವಾಗಿರುತ್ತದೆ. ಈ ವನ್ಯಜೀವಿ ಧಾಮದ ಎತ್ತರ ಸುಮಾರು 200ರಿಂದ 800 ಮೀಟರ್ ವರೆಗೂ ಹಬ್ಬಿಕೊಂಡಿದೆ. ಪ್ರಕೃತಿ ಮಾತೆಯ ಮಡಿಲಲ್ಲಿ ಹಾಯಾಗಿ ಕಾಲ ಕಳೆಯಲು ಇದು ಸೂಕ್ತ.

ಈ ಧಾಮವು ಅನೇಕ ಬಗೆಯ ವನ್ಯಜೀವಿಗಳಿಗೆ, ಸಸ್ಯರಾಶಿಗೆ ಮನೆಯಾಗಿದೆ. ಈ ಧಾಮದಲ್ಲಿ ಡಿಪ್ ಟೆರೋ ಕಾರ್ಪಸ್ ಟಿರ್ ಬಿನೇಟಿರ್, ಡಿಪ್ ಟೆರೋ ಕಾರ್ಪಸ್ ಮಾರ್ಕೋ ಕಾರ್ಪಸ್, ಟಿರ್ ಮಿನೇಲಿಯಾ ಮೈರಿಯೋಕಾರ್ಪಸ್ ಚಪ್ ಲಾಶಾ, ಸ್ಟೆರ್ ಕುಲಿಯಾ ವಿಲೋಸ ಮಂತಾದ ಗಿಡಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಹಾಗೆಯೇ, ವಿವಿಧ ಜಾತಿಯ ಆರ್ಕಿಡ್ ಮತ್ತು ಬಾಂಬೂಗಳನ್ನೂ ಕಾಣಬಹುದು.

ಡಂಪಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳೆಂದರೆ, ಹುಲಿ, ಕೋತಿ, ಬಹತ್ ಗಾತ್ರದ ಅಳಿಲು, ಬೆಟ್ಟದ ಗಿಬ್ಬನ್, ಲೀಫ್ ಮಂಕಿ, ಭಾರತೀಯ ಆನೆ, ಹಿಮಾಲಯನ್ ಕಪ್ಪು ಕರಡಿ, ಚಿರತೆ, ಬೊಗಳುವ ಜಿಂಕೆ, ಪೋರ್ಕ್ಯುಪೈನ್, ಗೋರ್, ಸ್ಲಾತ್ ಬೇರ್ ಮತ್ತು ಕಾಡು ಹಂದಿ. ಇದರ ಜೊತೆಗೆ ಅನೇಕ ಬಗೆಯ ಜೀವಿಗಲಾದ ಹೆಬ್ಬಾವು, ಮಾನಿಟರ್ ಲಿಜಾರ್ಡ್, ಬೆಟ್ಟದ ಆಮೆ, ಕಾಳಿಂಗ ಸರ್ಪಗಳು ಕಂಡುಬರುತ್ತವೆ.

ಐಜಾಲ್ ನಿಂದ ಪ್ರವಾಸಿಗರ ವಾಹನದ ಮೂಲಕ ಡಂಪಾವನ್ನು ತಲುಪಬಹುದು. ಈ ಸ್ಥಳಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ನವೆಂಬರ್ ನಿಂದ ಮಾರ್ಚ್ ವರೆಗೆ.

One Way
Return
From (Departure City)
To (Destination City)
Depart On
09 May,Sat
Return On
10 May,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 May,Sat
Check Out
10 May,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 May,Sat
Return On
10 May,Sun