Search
  • Follow NativePlanet
Share
ಮುಖಪುಟ » ಸ್ಥಳಗಳು » ಐಜಾಲ್ » ಹವಾಮಾನ

ಐಜಾಲ್ ಹವಾಮಾನ

ಐಜಾಲ್ ಗೆ ಭೇಟಿ ಕೊಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಸೂಕ್ತ ಕಾಲ. ಅಕ್ಟೋಬರ್ ತಿಂಗಳಲ್ಲಿ ಮಳೆ ಕಡಿಮೆಯಾಗುವುದರಿಂದ ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗಿರುತ್ತದೆ. ಚಳಿಗಾಲದಲ್ಲಿ ಪೂರ್ಣ ಅವಧಿಯಲ್ಲಿ ಪ್ರವಾಸಿಗರು ಪ್ರಕೃತಿಯಿಂದಾಗುವ ಅಡೆತಡೆಗಳಿಲ್ಲದೆ ಐಜಾಲ್ ನಗರವನ್ನು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಸಂದರ್ಶಿಸಬಹುದು.

ಬೇಸಿಗೆಗಾಲ

ಮಿಜೋರಾಮ್ ಹಿತಕರವಾದ ಬೇಸಿಗೆ ಕಾಲವನ್ನು ಹೊಂದಿರುತ್ತದೆ. ಇಲ್ಲಿ ಉಷ್ಣಾಂಶವು 20 ಡಿಗ್ರಿಯಿಂದ 29 ಡಿಗ್ರಿವರೆಗೆ ಇರುತ್ತದೆ. ಅಂದರೆ, ತಡೆಯಲಾಗದ ಬಿಸಿಲಿನ ಬೇಗೆಯೂ ಇರುವುದಿಲ್ಲ, ಅತಿ ತಂಪಿನ ಗಾಳಿಯೂ ಇರುವುದಿಲ್ಲ. ಹಾಗಾಗಿ ಮಾರ್ಚ್ ನಿಂದ ಜೂನ್ ವರೆಗೆ ಇರುವ ಬೇಸಿಗೆ ಕಾಲದ ಅವಧಿಯಲ್ಲಿ ಪ್ರವಾಸಿಗರು ಐಜಾಲ್ ನಗರವನ್ನು ಅನ್ವೇಷಿಸಲು ಮತ್ತು ಅದರ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಪ್ರಯಾಣ ಕೈಗೊಳ್ಳಬಹುದು.

ಮಳೆಗಾಲ

ಮುಂಗಾರಿನಲ್ಲಿ ಈ ಪ್ರದೇಶ ಅತಿ ಹೆಚ್ಚು ಮಳೆಯನ್ನು ಕಾಣುತ್ತದೆ. ಇದರ ಅವಧಇ ಮೇ ತಿಂಗಳ ಕೊನೆಯಿಂದ ಸೆಪ್ಟೆಂಬರ್ ವರೆಗೂ ಇರುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷ ಇಲ್ಲಿ ಸುಮಾರು 254 ಸೆಂ.ಮೀ. ಮಳೆಯಾಗುತ್ತದೆ. ಐಜಾಲ್ ಪ್ರತ್ಯೇಕವಾಗಿ 208 ಸೆಂ.ಮೀ. ಮಳೆ ಪ್ರತಿವರ್ಷ ಕಾಣುತ್ತದೆ. ಭಾರೀ ಮಳೆಯಿಂದಾಗಿ ರಸ್ತೆಗಳು ಸಂಪರ್ಕ ಕಡಿದುಕೊಳ್ಳುವುದರಿಂದ ಮುಂಗಾರಿನಲ್ಲಿ ಪ್ರವಾಸ ಸೂಕ್ತ ಅಲ್ಲ.

ಚಳಿಗಾಲ

ಚಳಿಗಾಲದಲ್ಲಿ ಅತಿಯಾದ ಚಳಿ ಇರುವುದಿಲ್ಲ. ಚಳಿಗಾಲದ ಅವಧಿ ನವೆಂಬರ್ ನಿಂದ ಫೆಬ್ರವರಿವರೆಗೆ ಇರುತ್ತದೆ. ಅತಿ ಕಡಿಮೆ ಉಷ್ಣಾಂಶವೆಂದರೂ 7 ಡಿಗ್ರಿ ಸೆಂಟಿಗ್ರೇಡ್ ನಿಂದ ಕೆಳಗೆ ಬರುವುದಿಲ್ಲ. ಗರಿಷ್ಠ ಉಷ್ಣಾಂಶ 21 ಡಿಗ್ರಿವರೆಗೆ ಏರುತ್ತದೆ. ಈ ಕಾಲದಲ್ಲಿ ಇಲ್ಲಿಗೆ ಪ್ರಯಾಣ ಬೆಳೆಸುವಾಗ ಉಲ್ಲನ್ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತ.