ಬಾರಾ ಬಜಾರ್ ಎಂಬುದು ಐಜಾಲ್ ನ ಜನಪ್ರಿಯವಾದ ವ್ಯಾಪಾರಿ ತಾಣ. ಇದು ಐಜಾಲ್ ನಗರದ ಫೆವರಿಟ್ ಶಾಪಿಂಗ್ ಸೆಂಟರ್. ಈ ಮಾರ್ಕೆಟ್ ಪಟ್ಟಣದ ಜೀವನಾಡಿ ಎಂದರೂ ತಪ್ಪಾಗಲಾರದು.
ಸಣ್ಣಗಲ್ಲಿಗಳ ಎರಡೂ ಬದಿಗಳಲ್ಲಿ ಅಂಗಡಿ-ಮುಂಗಟ್ಟುಗಳು ಇವೆ. ಇಲ್ಲಿ ಸಾಂಪ್ರದಾಯಿಕವಾದ ಉಡುಗೆಗಳು, ವಸ್ತುಗಳು, ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಮುಂತಾದ ಪ್ರತಿಯೊಂದು ವಸ್ತುಗಳು ಇಲ್ಲಿ ಮಾರಾಟಕ್ಕೆ ಇರುತ್ತವೆ. ಹೀಗಾಗಿ ಬಾರಾ ಬಜಾರ್ ರಂಗು ರಂಗಾಗಿ, ಆಕರ್ಷಕವಾಗಿ ಕಂಗೊಳಿಸುತ್ತದೆ. ಒಂದು ಬೀದಿಯಲ್ಲಿ ವಸ್ತುಗಳು, ಉಡುಗೆ ತೊಡುಗೆಗಳ ವ್ಯಾಪಾರದಿಂದ ಜನಜಂಗುಳಿ ಇದ್ದರೆ, ಮತ್ತೊಂದು ಬೀದಿಯಲ್ಲಿ ತರಕಾರಿ ಹಾಗು ಮೀನು ವ್ಯಾಪಾರ ಭರದಿಂದ ಸಾಗುತ್ತಿರುತ್ತದೆ.
ಬಹುತೇಕ ನಗರದ ನಿವಾಸಿಗಳು ಮನೆಯಲ್ಲಿ ತಯಾರಾದ ವಸ್ತುಗಳನ್ನು ಮಾರುವಾಗ ಅಥವಾ ಮಾರುಕಟ್ಟೆಯಲ್ಲಿ ಖರೀದಿತ ವಸ್ತುಗಳನ್ನು ಬಿಕರಿ ಮಾಡುವಾಗ ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲೇ ಇರುತ್ತಾರೆ. ಇದು ರಾಜ್ಯದ ರಾಜಧಾನಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಐಜಾಲ್ ಮಧ್ಯಭಾಗದಲ್ಲಿ ಬಾರಾ ಬಜಾರ್ ಉಪಸ್ಥಿತವಿದೆ. ಅಲ್ಲಿಯೇ ಲಭ್ಯವಿರುವ ಲೋಕಲ್ ಟ್ಯಾಕ್ಸಿ ತೆಗೆದುಕೊಂಡು ಮಾರುಕಟ್ಟೆ ತಲುಪಬಹುದು.


Click it and Unblock the Notifications