Search
  • Follow NativePlanet
Share
ಮುಖಪುಟ » ಸ್ಥಳಗಳು » ಅಹಮದಾಬಾದ್ » ಆಕರ್ಷಣೆಗಳು » ಹಳೆಯ ನಗರ ಮತ್ತು ಅಹಮದಾಬಾದ್‍ ನಗರದ ಗೋಡೆಗಳು

ಹಳೆಯ ನಗರ ಮತ್ತು ಅಹಮದಾಬಾದ್‍ ನಗರದ ಗೋಡೆಗಳು, ಅಹಮದಾಬಾದ್

3

ಅಹಮಾದಾಬಾದ್ ನಗರವನ್ನು ಕ್ರಿ.ಶ. 1411ರಲ್ಲಿ ಅಹಮದ್‍ಶಾರವರು ಸ್ಥಾಪನೆ ಮಾಡಿದರು. ನಂತರ ಇದರ ರಕ್ಷಣೆಗಾಗಿ ಇವರ ಮೊಮ್ಮಗ ಮಹಮ್ಮದ್ ಬೆಗ್ಡ ಒಂದು ಗೋಡೆಯನ್ನು ನಿರ್ಮಿಸಿದನು. ಈ ಗೋಡೆಯು 10 ಕಿ.ಮೀ ವ್ಯಾಸವನ್ನು ಹೊಂದಿದೆ. ಇದಕ್ಕೆ 12 ದ್ವಾರಗಳನ್ನು, 189 ಬುರುಜುಗಳನ್ನು ಮತ್ತು ಕೋಟೆಯ ಮೇಲೆ 6,000 ಕೈಸಾಲೆಗಳನ್ನು ನಿರ್ಮಿಸಿದನು.

ನಗರವು ವಿಸ್ತರಿಸಿದೆಂತೆಲ್ಲ ಈ ಗೋಡೆಯು ಸಹ ವಿನಾಶದ ಅಂಚಿಗೆ ಹೋಯಿತು. ಆದರು ಸಾಬರಮತಿ ನದಿಯ ಬಳಿ ಇದನ್ನು ನಾವು ಇಂದಿಗು ನೋಡಬಹುದು. ಆದರೆ ಆ ಹನ್ನೆರಡು ದ್ವಾರಗಳನ್ನು ನಾವು ಇಂದಿಗು ನೋಡಬಹುದು. ಅವುಗಳೆಂದರೆ ಶಹಪುರ್ ದ್ವಾರ, ದೆಹಲಿ ದ್ವಾರ, ಡರಿಯಪುರ್ ದ್ವಾರ, ಪ್ರೇಮ್ ದ್ವಾರ, ಕಲುಪುರ್ ದ್ವಾರ, ಪಂಚ ಕುವ ದ್ವಾರ, ಸಾರಂಗ್‍ಪುರ್ ದ್ವಾರ, ರೈಪುರ್ ದ್ವಾರ, ಅಸ್ಟೋಡಿಯ ದ್ವಾರ, ಮಹುಧ ದ್ವಾರ, ಜಮಾಲ್‍ಪುರ್ ದ್ವಾರ, ಖಂಜಿಯ ದ್ವಾರ, ರೈಖಡ್ ದ್ವಾರ, ಗಣೇಶ್ ದ್ವಾರ ಮತ್ತು ರಾಮ್ ದ್ವಾರಗಳಾಗಿವೆ. ಈ ಎಲ್ಲಾ ದ್ವಾರಗಳ ಮೇಲೆ ಸುಂದರವಾದ ಕೆತ್ತನೆಗಳನ್ನು ಮತ್ತು ಬರಹಗಳನ್ನು ನಾವು ನೋಡಬಹುದಾಗಿದೆ.

ಈ ಗೋಡೆಯ ಒಳಗೆ ಇರುವ ನಗರವನ್ನು ಹಳೆಯ ನಗರವೆಂದು ಕರೆಯಲಾಗುತ್ತದೆ. ಇದರ ಒಳಗೆ ಸಮಾನಾಂತರವಾಗಿರುವ ಇಕ್ಕಟ್ಟಾದ ಹಾದಿಗಳನ್ನು ನಾವು ಕಾಣಬಹುದು. ಇಲ್ಲಿ ದ್ವಿಚಕ್ರ ವಾಹನ ಸವಾರಿಗೆ ಮತ್ತು ನಡೆದುಕೊಂಡು ಹೋಗಲು ಮಾತ್ರ ಸಾಧ್ಯವಾಗುತ್ತದೆ. ಹಳೆಯ ನಗರವನ್ನು " ಪೊಲ್ಸ್" ಎಂದು ಕರೆಯಲ್ಪಡುವ ಘಟಕಗಳಾಗಿ ವಿಭಾಗಿಸಲಾಗಿದೆ. ಈ ಪೊಲ್ಸ್ ನಲ್ಲಿ ಕೆಲವು ಜಾತಿ ಮತ್ತು ಸಮುದಾಯದವರು ಒಟ್ಟಿಗೆ ಜೀವಿಸುತ್ತಿರುತ್ತಾರೆ. ಕೆಲವೊಂದು ಪೊಲ್ಸ್ ಗಳ ಮಧ್ಯೆ ಭಾಗದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಾವು ಕಾಣಬಹುದು. ಇವು ತಮ್ಮ ಸುಂದರವಾದ ವಾಸ್ತು ಶಿಲ್ಪಗಳಿಂದ ಮತ್ತು ಕೆತ್ತನೆಗಳಿಂದ, ಮರದ ದ್ವಾರ ಬಾಗಿಲುಗಳಿಂದ, ಸ್ತಂಭಗಳಿಂದ ಮತ್ತು ಉಬ್ಬು ಶಿಲ್ಪಗಳಿಂದ ನಮ್ಮ  ಗಮನ ಸೆಳೆಯುತ್ತವೆ.

ಈ ಪೊಲ್ಸ್ ಗಳಲ್ಲಿ " ಚಬುತ್ರೊ" ಎಂಬ ಹಕ್ಕಿ ಗೂಡುಗಳನ್ನು ನಿರ್ಮಾಣ ಮಾಡಿರುವುದನ್ನು ನಾವು ಕಾಣಬಹುದು. ಈ ನಗರದ ನಿರ್ಮಾಣಕ್ಕಾಗಿ ಮರಗಳನ್ನು ಕತ್ತರಿಸಿದಾಗ, ಅವುಗಳಲ್ಲಿರುವ ಹಕ್ಕಿಗಳು ಆಶ್ರಯ ಪಡೆಯಲಿ ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu