Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ತಾಜ್ ಮಹಲ್

ತಾಜ್ ಮಹಲ್, ಆಗ್ರಾ

5

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್‍ಮಹಲನ್ನು ಮೊಘಲ್ ಚಕ್ರವರ್ತಿಯಾದ ಶಾ ಜಹನನು ತನ್ನ ಪ್ರೀತಿ ಪಾತ್ರ ಮಡದಿ ಮುಮ್ತಾಜ್ ಮಹಲಳ ನೆನಪಿಗಾಗಿ ನಿರ್ಮಿಸಿದನು. ಇದೊಂದು ಗೋರಿಯಾಗಿದ್ದು, ಪ್ರೇಮದ ಅಮರತ್ವವನ್ನು ಸಾರುವ ಸ್ಮಾರಕವಾಗಿ ಇದು ಪ್ರಖ್ಯಾತಿಯನ್ನು ಪಡೆದಿದೆ. ಈ ಕಟ್ಟಡವು ಭಾರತೀಯ, ಪರ್ಶಿಯನ್ ಮತ್ತು ಇಸ್ಲಾಮಿಕ್ ವಾಸ್ತುಶಿಲ್ಪದ ಅಪೂರ್ವ ಸಮ್ಮಿಲನದ ಮಾದರಿಯಾಗಿ ನಿಂತಿದೆ.

1632 ರಲ್ಲಿ ಪ್ರಾರಂಭಗೊಂಡ ಈ ಕಟ್ಟಡದ ನಿರ್ಮಾಣ ಕಾರ್ಯವು 1653 ಅಂದರೆ 21 ವರ್ಷಗಳ ನಂತರ ಪೂರ್ಣಗೊಂಡಿತು. ಸಾವಿರಾರು ಸಂಖ್ಯೆಯ ಕುಶಲ ಕರ್ಮಿಗಳು, ಕಲಾವಿದರು, ಮತ್ತು ಕಲ್ಲು ಕುಟಿಗರಿಂದ ನಿರ್ಮಾಣಗೊಂಡ ಈ ತಾಜ್ ಮಹಲ್ ಪ್ರಪಂಚದ ಏಳು ಅದ್ಭುತಗಳಲ್ಲಿ ಸ್ಥಾನ ಪಡೆದಿದೆ. ಈ ಸಂಕೀರ್ಣದ ಕೇಂದ್ರ ಭಾಗದಲ್ಲಿರುವ ರಾಜ ವೈಭವದಿಂದ ಕೂಡಿದ ಕಟ್ಟಡದಲ್ಲಿ ಶಹ ಜಹಾನಿನ ಮಡದಿಯ ಗೋರಿಯನ್ನು ನಾವು ನೋಡಬಹುದು. ಈ ಗೋರಿಯನ್ನು ಚೌಕಾಕಾರದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಬಿಳಿಯ ಅಮೃತ ಶಿಲೆಯಿಂದ ನಿರ್ಮಾಣಗೊಂಡ ಈ ಗೋರಿಯ ಮೇಲೆ ಗುಮ್ಮಟವಿದೆ. ಇಲ್ಲಿಗೆ ಕಮಾನಿನಾಕಾರದ ದ್ವಾರದ ಮೂಲಕ ಪ್ರವೇಶಿಸಬಹುದು.

ತಾಜ್ ಮಹಲ್ 40 ಮೀಟರ್ ಎತ್ತರದ ಸುಂದರವಾದ ಮಿನಾರುಗಳಿಂದ ಕೂಡಿದೆ. ಒಂದನ್ನೊಂದು ಹೋಲುವ ಅನುರೂಪವಾದ ಮಿನಾರುಗಳು ಸಾಮಾನ್ಯ ಮಸೀದಿಯಲ್ಲಿ ಮುಲ್ಲಾಗಳು ಪ್ರಾರ್ಥನೆಗೆ ಕರೆ ನೀಡಲು ಬಳಸುವ ಮಿನಾರಿನಂತೆ ಇವೆ. ಪ್ರತಿ ಮಿನಾರ್ ಮೂರು ಭಾಗಗಳನ್ನು ಹೊಂದಿದ್ದು, ಎರಡು ಮೊಗಸಾಲೆಗಳನ್ನು ಹೊಂದಿವೆ.

ಇಲ್ಲಿ ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾಗಿರುವ ಚಾರ್ ಬಾಗ್ ಎಂಬ ಉದ್ಯಾನವನವನ್ನು ನಾವು ಕಾಣಬಹುದು. ಇಲ್ಲಿ ಕಾಲು ಹಾದಿಗಳು ಮತ್ತು 16 ಪುಷ್ಪೋದ್ಯಾನವನಗಳನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed