Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಮರಿಯಮ್ ಉಝ್- ಝಮನಿ ಅರಮನೆ

ಮರಿಯಮ್ ಉಝ್- ಝಮನಿ ಅರಮನೆ, ಆಗ್ರಾ

2

ಮರಿಯಮ್ ಎಂಬಾಕೆ ಚಕ್ರವರ್ತಿ ಅಕ್ಬರನ ಮೊಟ್ಟ ಮೊದಲ ರಜಪೂತ ರಾಣಿ. ಈಕೆಯು ಇಂದು ಅಜ್ಮೀರ್ ಎಂದು ಕರೆಯಲ್ಪಡುವ ಅಂಬೇರದ ಕಛವಹಾ ರಜಪೂತ ಸೇನಾಧಿಪತಿಯಾದ ರಾಜ ಭರ್ಮಲ್‍ನ ಯುವರಾಣಿಯಾಗಿದ್ದಳು. ಮರಿಯಮ್‍ಳು ಅಕ್ಬರನು ಕಾತರದಿಂದ ಕಾಯುತ್ತಿದ್ದ ತನ್ನ ಪುತ್ರ ಸಲೀಂನಿಗೆ ಜನ್ನ ನೀಡಿದವಳು. ನಂತರ ಸಲೀಮ್ ನೂರುದ್ದೀನ್ ಸಲೀಂ ಜಹಾಂಗೀರ್ ಎಂದು ಕರೆಯಲ್ಪಟ್ಟನು. ಹೀಗಾಗಿ ಈಕೆಯು ಮರಿಯಂ ಉಝ್ ಝಮನಿ ಎಂಬ ಬಿರುದಿನಿಂದ ಕರೆಯಲ್ಪಟ್ಟಳು. ಅದರರ್ಥ ಪ್ರಸಕ್ತ ಕಾಲದ ಮಾತೆಯೆಂದಾಗುತ್ತದೆ.

ಮರಿಯಮ್ ಉಝ್- ಝಮನಿಯು 1622ರಲ್ಲಿ ನಿಧನ ಹೊಂದಿದಳು. ಆಕೆಯ ನೆನಪಿನಾರ್ಥವಾಗಿ ಪುತ್ರ ಜಹಾಂಗೀರನು ಆಕೆಯ ಹೆಸರಲ್ಲಿ ಒಂದು ಅರಮನೆಯನ್ನು ಕಟ್ಟಿಸಿದನು. ಈ ಅರಮನೆಯು ಪ್ರಸ್ತುತ ಜ್ಯೋತಿ ನಗರ್ ನಲ್ಲಿರುವ ಟಾಂಟ್‍ಪುರ್ ರಸ್ತೆಯಲ್ಲಿ ನೆಲೆಗೊಂಡಿದೆ. ಇದು ಅಕ್ಬರನ ಸಮಾಧಿಗೆ ಸಮೀಪದಲ್ಲಿ ನೆಲೆಗೊಂಡಿದೆ.

ಈ ಅರಮನೆಯನ್ನು ಪರ್ದಾದಲ್ಲಿ ಬದುಕುವ ರಾಜ ಮನೆತನದ ಸ್ತ್ರೀಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಯಿತು. ಇಲ್ಲಿ ಒಂದು ಸಭಾಂಗಣವಿದ್ದು, ಅದರ ಸುತ್ತ ಹಲವಾರು ಮನೆಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಇದರ ಉತ್ತರ ಭಾಗದಲ್ಲಿ ಒಂದು ಉದ್ಯಾನವನವಿದೆ. ಒಂದು ಕಮಾನು ಸಾಲಿನ ಸೇತುವೆಯ ಮೂಲಕ ನಾವು ಇಲ್ಲಿಂದ ಅರಮನೆಗೆ ಸಹ ಹೋಗಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu