Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಕೀತಂ ಸರೋವರ ಮತ್ತು ಸುರ್ ಸರೋವರ್ ಪಕ್ಷಿಧಾಮ

ಕೀತಂ ಸರೋವರ ಮತ್ತು ಸುರ್ ಸರೋವರ್ ಪಕ್ಷಿಧಾಮ, ಆಗ್ರಾ

2

ಕೀತಂ ಸರೋವರವು ಆಗ್ರಾ- ದೆಹಲಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 2 ರಲ್ಲಿ ಕಂಡುಬರುತ್ತದೆ. ಇದು ಸಿಕಂದರದಿಂದ 12 ಕಿ.ಮೀ ಮತ್ತು ಆಗ್ರಾದಿಂದ 20 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ನಯನ ಮನೋಹರವಾದ ನೀರಿನ ತಾಣವು ಪ್ರಶಾಂತವಾದ ಪರಿಸರದ ನಡುವೆ ನೆಲೆಗೊಂಡಿದೆ. ನಗರ ಜೀವನದಿಂದ ಬೇಸತ್ತ ಜನರು ವಾರಾಂತ್ಯವನ್ನು ಕಳೆಯಲು ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ.

7.13 ಚ,ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಜಲಾಶಯವು ಪಂಚ ಭುಜಾಕೃತಿಯಲ್ಲಿದೆ. ಈ ಕೆರೆಯು ಹಲವಾರು ಜಲಚರ ಪಕ್ಷಿಗಳನ್ನು ಮತ್ತು ಮೀನುಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಇದು ಸಹ ಈ ಸ್ಥಳವನ್ನು ಮತ್ತಷ್ಟು ಆಕರ್ಷಕಗೊಳಿಸಲು ನೆರವಾಗಿದೆ.

ಸುರ್ ಸರೋವರ್ ಪಕ್ಷಿ ಧಾಮ

ಕೀತಮ್ ಸರೋವರದಲ್ಲಿ ನೆಲೆಗೊಂಡಿರುವ ಸುರ್ ಸರೋವರ್ ಪಕ್ಷಿಧಾಮವು ಒಂದು ನಯನ ಮನೋಹರವಾದ ಪಕ್ಷಿಧಾಮವಾಗಿದೆ. ಇದು ಸುಮಾರು 100ಕ್ಕೂ ಅಧಿಕ ದೇಶಿಯ ಮತ್ತು ಅಂತಾರಾಷ್ಟ್ರೀಯ ವಲಸೆ ಹಕ್ಕಿಗಳಿಗೆ ಆಶ್ರಯವನ್ನೊದಗಿಸಿದೆ. ಜೊತೆಗೆ 12 ಜಾತಿಯ ಸಸ್ತನಿಗಳಿಗೆ ಹಾಗು 18 ಜಾತಿಯ ಸರಿಸೃಪಗಳನ್ನು ಸಹ ನಾವಿಲ್ಲಿ ಕಾಣಬಹುದು. ಸೈಬಿರಿಯನ್ ಕೊಕ್ಕರೆ, ಬ್ರಾಹ್ಮಣಿ ಬಾತುಕೋಳಿಗಳು, ಹೆರ್ಜಾಲೆಗಳು, ಸಾರಸ್ ಕೊಕ್ಕರೆಗಳು, ಶೋವೆಲ್ಲರ್ ಗಳು, ಗಡ್‍ವಾಲ್‍ಗಳು ಮತ್ತು ಬಾರ್ ತಲೆಯ ಗೀಸ್‍ಗಳನ್ನು ನಾವಿಲ್ಲಿ ಕಾಣಬಹುದು. ಕೀತಂ ರೈಲು ನಿಲ್ದಾಣದಿಂದ ಸಹ ಇಲ್ಲಿಗೆ ತಲುಪಬಹುದು. ಉತ್ತರ ಪ್ರದೇಶ ಅರಣ್ಯ ಇಲಾಖೆಯು 27 ಮಾರ್ಚ್ 1991ರಲ್ಲಿ ಇದನ್ನು ರಾಷ್ಟ್ರೀಯ ಪಕ್ಷಿ ಧಾಮವನ್ನಾಗಿ ಘೋಷಿಸಿದರು.

One Way
Return
From (Departure City)
To (Destination City)
Depart On
29 Jul,Wed
Return On
30 Jul,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Jul,Wed
Check Out
30 Jul,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Jul,Wed
Return On
30 Jul,Thu