Search
  • Follow NativePlanet
Share
ಮುಖಪುಟ » ಸ್ಥಳಗಳು » ಆಗ್ರಾ » ಆಕರ್ಷಣೆಗಳು » ಕಂಚ್ ಮಹಲ್

ಕಂಚ್ ಮಹಲ್, ಆಗ್ರಾ

2

ಸಿಕಂದರದಲ್ಲಿರುವ ಅಕ್ಬರನ ಗೋರಿಗೆ ಸಮೀಪದಲ್ಲಿರುವ ಚೌಕಾಕಾರದ ಕಂಚ್ ಮಹಲ್ ದೇಶಿ ಮೊಘಲ್ ವಾಸ್ತು ಶಿಲ್ಪಕ್ಕೆ ಒಂದು ಸಮರ್ಥ ಉದಾಹರಣೆಯಾಗಿ ನಿಂತಿದೆ. ದಾಖಲೆಗಳ ಪ್ರಕಾರ 1605 ರಿಂದ 1619ರ ಒಳಗೆ ಈ ಮಹಲ್ ನಿರ್ಮಾಣಗೊಂಡಿದೆ. ಈ ಮಹಲಿನ ನಿರ್ಮಾಣದಲ್ಲಿ ಯಥೇಚ್ಛವಾಗಿ ಹೆಂಚುಗಳನ್ನು ಬಳಸಲಾಗಿದೆ. ಹಾಗಾಗಿಯೇ ಇದಕ್ಕೆ ಕಂಚ್ ಮಹಲ್ ಎಂದು ಕರೆಯುತ್ತಾರೆ. ಗಾರೆಯಿಂದ ನಿರ್ಮಾಣಗೊಂಡ ಹೊರಾಂಗಣದ ಗೋಡೆಗಳನ್ನು ತುಂಬಾ ಸುಂದರವಾಗಿರುವ ಕೆಂಪುಮರಳುಗಲ್ಲಿನ ಕೆತ್ತನೆಗಳಿಂದ ಅಲಂಕರಿಸಲಾಗಿದೆ. ಸುರುಳಿಯಾಕಾರದ ಮಾಡಿನಲ್ಲಿ ದ್ರಾಕ್ಷಾ ರಸದ ಹೂದಾನಿಗಳನ್ನು, ಹೂವಿನ ಲತಾಬಳ್ಳಿಗಳನ್ನು ಮತ್ತು ರೇಖಾಗಣಿತದ ವಿನ್ಯಾಸಗಳನ್ನು ನಾವು ಕಾಣಬಹುದು.

ಈ ಅರಮನೆಯನ್ನು ಮೊದಲು ಹರಮ್ ಅಥವಾ ರಾಣಿಯರ ನಿವಾಸವಾಗಿ ಬಳಸಲಾಗುತ್ತಿತ್ತು. ನಂತರ ಜಹಂಗಿರ್ ಇದನ್ನು ಶಿಖರ್ಗಹ್ ಎಂದು ಕರೆಯಲ್ಪಡುತ್ತಿದ್ದ ಶಿಖಾರಿ ನಿವಾಸವನ್ನಾಗಿ ಬಳಸಲು ಆರಂಭಿಸಿದನು. ಎರಡು ಅಂತಸ್ತಿನ ಈ ಮಹಲ್ ನಾಲ್ಕು ಮೂಲೆಗಳಲ್ಲಿ ಚೌಕಾಕಾರದ ಕೋಣೆಗಳನ್ನು ಹೊಂದಿದೆ. ಪ್ರಧಾನ ಹಜಾರೆಗೆ ಎರಡು ದ್ವಾರಗಳಿವೆ. ಇವುಗಳ ಮೂಲಕ ಗಾಳಿ ಮತ್ತು ಬೆಳಕು ಸುಲಲಿತವಾಗಿ ಹಾದುಹೋಗುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಕೋಣೆಗಳಿಗೆ ಜರೋಖಾ ಮತ್ತು ಮೊಗಸಾಲೆಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಕೋಣೆಗಳ ಅಲಂಕಾರ ಮತ್ತು ಗಾಳಿ,ಬೆಳಕು ಆಡಲು ಸುಲಭವಾಗುವಂತೆ ಮಾಡಲಾಗಿದೆ. ಈ ಕಟ್ಟಡದ ಸುತ್ತಲೂ ನೀರಿನ ಕಾಲುವೆಗಳು, ತೊಟ್ಟಿಗಳು ಮತ್ತು ಕಾಲು ಹಾದಿಗಳಿಂದ ಕೂಡಿದ ಒಂದು ಸುಂದರವಾದ ಉದ್ಯಾನವನವನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
29 Aug,Sat
Return On
30 Aug,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Aug,Sat
Check Out
30 Aug,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Aug,Sat
Return On
30 Aug,Sun