ಅಗರ್ತಲಾ ನಗರ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿರುವ ಸಿಪಿಹಿಜಾಲ ವನ್ಯಮೃಗ ಅಭಯಾರಣ್ಯ, ತನ್ನ ಹಸಿರು ಮತ್ತು ಹೇರಳವಾದ ಭೂದೃಶ್ಯಕ್ಕೆ ಹೆಸರುವಾಸಿಯಾಗಿದೆ. ಇದು 18.5 ಚದರ ಕಿ.ಮೀ ಪ್ರದೇಶವನ್ನು ವ್ಯಾಪಿಸಿದೆ. ಮತ್ತು ವಲಸೆ ಹಕ್ಕಿಗಳು ಮತ್ತು ಪ್ರಾಣಿಗಳ ನೆಲೆಯಾಗಿದೆ.
ವನ್ಯಮೃಗ ಅಭಯಾರಣ್ಯವನ್ನು 1972 ರಲ್ಲಿ ನಿರ್ಮಿಸಲಾಯಿತು ಮತ್ತು ಅದೇ ವರ್ಷದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೆಸರು ಗಳಿಸಿದೆ. ಇಲ್ಲಿ 150 ಪ್ರಭೇದಗಳಿಗಿಂತ ಹೆಚ್ಚು ವಲಸೆ ಪಕ್ಷಿಗಳನ್ನು ಪತ್ತೆಹಚ್ಚಲಾಗಿದೆ. ಕಾಡಿನ ಹೊರತಾಗಿ, ಈ ಅಭಯಾರಣ್ಯದಲ್ಲಿ ಒಂದು ಜಿಂಕೆ ಪಾರ್ಕ್ ಮತ್ತು ಸರೋವರಗಳನ್ನು ಕಾಣಬಹುದಾಗಿದೆ.
ಈ ವನ್ಯಮೃಗ ಅಭಯಾರಣ್ಯವನ್ನು ಮೂಲತಃ ಇಲ್ಲಿ ವಾಸಿಸುವ ಪ್ರಾಣಿಗಳ ಪ್ರತ್ಯೇಕತೆಯ ಆಧಾರದ ಮೇಲೆ ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಮಾಂಸಾಹಾರಿಗಳ ವಿಭಾಗ, ಸಸ್ತನಿ ವಿಭಾಗ, ಗೊರಸುಳ್ಳ ಪ್ರಾಣಿಗಳ ವಿಭಾಗ, ಸರೀಸೃಪ ವಿಭಾಗ ಮತ್ತು ಪಂಜರ ವಿಭಾಗ. ಸಿಪಹಿಜಾಲ ವನ್ಯಮೃಗ ಅಭಯಾರಣ್ಯ ಅಬಸಾರಿಕಾ(ಅಭಿಸಾರಿಕಾ) ಮತ್ತು ಅಮೃತ್ ಸಾಗರ ಎಂಬ ಎರಡು ನೈಸರ್ಗಿಕ ಕೆರೆಗಳನ್ನು ಹೊಂದಿದೆ. ಇಲ್ಲಿ ದೋಣಿ ವಿಹಾರ ಸೌಲಭ್ಯಗಳನ್ನು ಒದಗಿಸಲಾಗಿದೆ. ಅಭಯಾರಣ್ಯದ ವ್ಯಾಪ್ತಿಯೊಳಗೆ ವಿಶ್ರಾಂತಿ ಗೃಹಗಳನ್ನೂ ಕೂಡ ನಿರ್ಮಿಸಲಾಗಿದೆ.


Click it and Unblock the Notifications