ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭಾರತದ ಯೋಜಿತ ನಗರ ಚಂದೀಗಢ್

ಭಾರತದ ವಾಯುವ್ಯ ಭಾಗದ ಶಿವಾಲಿಕ್ ತಪ್ಪಲಿನಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿರುವ ಚಂದೀಗಢ್ ನಗರ ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಿಗೆ ರಾಜಧಾನಿ. ಇಲ್ಲಿರುವ ಪುರಾತನ ದೇವಾಲಯದಲ್ಲಿರುವ ಹಿಂದೂ ದೇವತೆ ಚಾಂದಿ(ಚಂಡಿ)ಯಿಂದಾಗಿ ನಗರಕ್ಕೆ ಚಂದೀಗಢ್ ಎನ್ನುವ ಹೆಸರು ಬಂದಿದೆ. ಚಂದೀಗಢ್ ನಗರ ಅದರ ವಿನ್ಯಾಸ ಮತ್ತು ವಾಸ್ತುಶಿಲ್ಪದಿಂದಾಗಿ ಭಾರತದ ಮೊದಲ ಯೋಜಿತ ನಗರವೆಂದು ವಿಶ್ವವಿಖ್ಯಾತಿ ಪಡೆದುಕೊಂಡಿದೆ.

ಚಂದೀಗಢ್ ಚಿತ್ರಗಳು, ತೆರೆದ ಕೈ ಸ್ಮಾರಕ
Image source: commons.wikimedia.org

ಭಾರತ ಇಬ್ಭಾಗವಾದ ಬಳಿಕ ಪಂಜಾಬ್ ನ ರಾಜಧಾನಿಯಾಗಿದ್ದ ಲಾಹೋರ್ ನ ಬದಲಿಗೆ ಹೊಸ ರಾಜಧಾನಿಯನ್ನು ನಿರ್ಮಿಸಬೇಕಿತ್ತು. ಸ್ವಾತಂತ್ರ್ಯ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಹೊಸ ಹಾಗೂ ಯೋಜಿತ ನಗರವನ್ನು ನಿರ್ಮಿಸಲು ನಿರ್ಧರಿಸಿದರು. 1950 ರಲ್ಲಿ ಫ್ರಾನ್ಸ್ ನ ವಾಸ್ತುಶಿಲ್ಪಿ ಹಾಗೂ ನಗರ ಯೋಜಕ ಲಿ ಕೊರ್ಬಸೈಯರ್ ಎಂಬಾತ ಚಂದೀಗಢ್ ನ ನಗರವನ್ನು ವಿನ್ಯಾಸಗೊಳಿಸಿದ. 1966 ರಲ್ಲಿ ಈ ಅತ್ಯುತ್ತಮವಾಗಿ ಯೋಜಿತವಾಗಿದ್ದ ನಗರವನ್ನು ಕೇಂದ್ರಾಡಳಿತ ಪ್ರದೇಶ ಮತ್ತು ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳ ರಾಜಧಾನಿಯೆಂದು ಘೋಷಿಸಲಾಯಿತು.

ಚಂದೀಗಢ್ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ತಾಣಗಳು

ಲಿ ಕೊರ್ಬಸೈಯರ್ ರ ಅತಿದೊಡ್ಡ ಸೃಷ್ಟಿಯಾಗಿರುವ `ತೆರೆದ ಕೈ'(ದಿ ಓಪನ್ ಹ್ಯಾಂಡ್) ನಗರದ ಒಳಗಡೆ ಇರುವ ಕ್ಯಾಪಿಟಲ್ ಕಾಂಪ್ಲೆಕ್ಸ್ ನಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂರು ಸಂಸ್ಥೆಗಳು ಮತ್ತು ನಗರ ಲಾಂಛನ ಹೊಂದಿರುವ ಕ್ಯಾಪಿಟಲ್ ಕಾಂಪ್ಲೆಕ್ಸ್ ಚಂದೀಗಢ್ ನಲ್ಲಿ ಪ್ರವಾಸಿಗರ ಆಕರ್ಷಣೀಯ ತಾಣ. ಸಂಸ್ಕೃತಿ ಮತ್ತು ಕಲೆಯ ವಾಸಸ್ಥಾನವಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ರಾಕ್ ಗಾರ್ಡನ್ ಚಂದೀಗಢ್ ನ ಮತ್ತೊಂದು ಜನಪ್ರಿಯ ಪ್ರವಾಸಿ ತಾಣ. ಅಂತಾರಾಷ್ಟ್ರೀಯ ಗೊಂಬೆ ಮ್ಯೂಸಿಯಂ ಮತ್ತು ಸರ್ಕಾರಿ ಮ್ಯೂಸಿಯಂ ಮತ್ತು ಕಲಾ ಗ್ಯಾಲರಿ ನಗರದ ಆಕರ್ಷಣೆಯಾಗಿವೆ.

ಚಂದೀಗಢ್ ನ ಉತ್ತರದಲ್ಲಿರುವ ಅರಣ್ಯಗಳು ಹೆಚ್ಚಿನ ಸಂಖ್ಯೆಯ ವನ್ಯಜೀವಿ ಪ್ರೇಮಿಗಳನ್ನು ಆಕರ್ಷಿಸುತ್ತದೆ. ಕನ್ಸಾಲ ಮತ್ತು ನೆಪ್ಲಿ ಅರಣ್ಯ ಪ್ರದೇಶಗಳಲ್ಲಿ ಸಸ್ಯರಾಶಿ ಹಾಗೂ ವನ್ಯಪ್ರಾಣಿಗಳು ವಿಫುಲವಾಗಿದೆ. ಆದರೆ ಈ ಪ್ರದೇಶದ ಸುಖ್ನಾ ಅಭಯಾರಣ್ಯ ಹೆಚ್ಚು ಜನಪ್ರಿಯ. ನೈಸರ್ಗಿಕವಾಗಿ ನಿರ್ಮಿತವಾಗಿರುವ ಸುಖ್ನಾ ಕೊಳದ ನೀರುಕಟ್ಟು ವೈವಿಧ್ಯಮಯ ಸಸ್ತನಿಗಳು, ಪಕ್ಷಿಗಳು ಮತ್ತು ಸರೀಸೃಪಗಳಿಗೆ ನೆಲೆಯಾಗಿದೆ. ಚಂದೀಗಢ್ ನ ಸಮೀಪದ ಮೊಹಾಲಿಯಲ್ಲಿರುವ ಛತ್ಬೀರ್ ಮೃಗಾಲಯ ಮತ್ತೊಂದು ಆಕರ್ಷಣೆ. ಗುಲಾಬಿ ಗಾರ್ಡನ್ ಮತ್ತು ಗುರುದ್ವಾರ ಕೂಹಾನಿ ಸಾಹಿಬ್ ಚಂದೀಗಢ್ ಪ್ರವಾಸೋದ್ಯಮದ ಇತರ ಆಕರ್ಷಣೀಯ ತಾಣಗಳಾಗಿವೆ.

ಚಂದೀಗಢ್ ಗೆ ಪ್ರಯಾಣಿಸುವುದು ಹೇಗೆ?

ದೇಶ ವಿವಿಧ ಭಾಗಗಳಿಂದ ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ಚಂದೀಗಢ್ ಗೆ ತಲುಪಬಹುದು. ದೇಶೀಯ ವಿಮಾನ ನಿಲ್ದಾಣ ನಗರಕ್ಕಿಂತ 8 ಕಿ.ಮೀ. ದೂರದಲ್ಲಿದೆ. ಚಂದೀಗಢ್ ರೈಲು ನಿಲ್ದಾಣ ಸೆಕ್ಟರ್ 17ರಲ್ಲಿದೆ. ಸೆಕ್ಟರ್ 17 ಮತ್ತು ಸೆಕ್ಟರ್ 43ರಲ್ಲಿರುವ ಅಂತರ್ ರಾಜ್ಯ ಬಸ್ ಟರ್ಮಿನಲ್ ಗಳಿಂದ ಬಸ್ ವ್ಯವಸ್ಥೆಯಿದೆ.

ಚಂದೀಗಢ್ ಗೆ ಭೇಟಿ ನೀಡಲು ಸೂಕ್ತ ಸಮಯ

ಸಪ್ಟೆಂಬರ್ ನಿಂದ ಮಾರ್ಚ್ ತಿಂಗಳ ತನಕ ಚಂದೀಗಢ್ ಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

English Summary :
The union territory of Chandigarh is the capital of two Indian cities - Punjab and Haryana. Its name is derived from an ancient temple on the site dedicated to the Hindu Goddess, Chandi. With its urban design and architecture, Chandigarh tourism is acclaimed worldwide as the first planned city of India.
Please Wait while comments are loading...