ಸುಖ್ನಾ ಸರೋವರ ಮತ್ತು ಕ್ಯಾಪಿಟಲ್ ಕಾಂಪ್ಲೆಕ್ಸ್ ಮಧ್ಯೆ ಸೆಕ್ಟರ್ 1ರಲ್ಲಿ ಈ ರಾಕ್ ಗಾರ್ಡನ್ ಇದೆ. ಇದು ನಗರದ ಅತ್ಯಂತ ಆಕರ್ಷಣೀಯ ತಾಣ. 40 ವರ್ಷ ಮೊದಲು ನೆಕ್ ಚಾಂದ್ ಎನ್ನುವವರು ಈ ಗಾರ್ಡನ್ ನನ್ನು ನಿರ್ಮಿಸಿದ್ದು, ಕೈಗಾರಿಕೆ ಮತ್ತು ನಗರದ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಮಾಡಿದಂತಹ ಹಲವಾರು ಕಲಾಕೃತಿಗಳು ಇದರಲ್ಲಿದೆ. ಜಲಪಾತ, ಕೆರೆ ಮತ್ತು ತಿರುಚಿದ ಮಾರ್ಗ ಸೇರಿದಂತೆ ಗಾರ್ಡ್ ನಲ್ಲಿ 14 ಆಕರ್ಷಕ ವಿಭಾಗಗಳಿವೆ. ಇದನ್ನು ನೋಡಿದಾಗ ನಾವೀನ್ಯತೆ ಹಾಗೂ ಕಲ್ಪನೆ ಸಾಕಾರಗೊಂಡಂತಿದೆ.
ಸುಮಾರು 40 ಎಕ್ರೆ ಜಾಗದಲ್ಲಿರುವ ಈ ರಾಕ್ ಗಾರ್ಡ್ ನಲ್ಲಿ ಮನೆಯ ತ್ಯಾಜ್ಯ ವಸ್ತುಗಳಾದ ತುಂಡಾದ ಬಳೆಗಳು, ಚೈನಾ ವೇರ್, ವಯರ್, ಪಿಂಗಾಣಿ, ವಾಹನಗಳ ಬಿಡಿಭಾಗ ಮತ್ತು ಫ್ಲೋರೆಸೆಂಟ್ ಟ್ಯೂಬ್ ಗಳಿಂದ ಮಾಡಿದಂತಹ ಹಲವಾರು ಕಲಾಕೃತಿಗಳಿವೆ. ಕಟ್ಟಡದ ತ್ಯಾಜ್ಯ, ಸಲಾಕೆಗಳು, ಮಣ್ಣೆನ, ಆಟದ ಗೋಲಿಗಳು ಮತ್ತು ಟೆರಾಕೋಟಾದಿಂದ ನಿರ್ಮಿಸಲಾದ ಮಡಿಕೆಗಳನ್ನು ಕಟ್ಟಡ, ಮನುಷ್ಯ ಮತ್ತು ಪ್ರಾಣಿಗಳ ರೂಪಕೊಟ್ಟು ಪ್ರದರ್ಶನಕ್ಕಿಡಲಾಗಿದೆ. ಈ ಅದ್ಭುತ ಗಾರ್ಡನ್ ಪ್ರತೀ ದಿನ ಬೆಳಗ್ಗೆ 9ರಿಂದ ತೆರೆದಿರುತ್ತದೆ.