ಈ ಗುಲಾಬಿ ಉದ್ಯಾನವನ್ನು ಚಂದೀಗಢ್ ನಲ್ಲಿ 1967ರಲ್ಲಿ ನಿರ್ಮಿಸಲಾಗಿತ್ತು. ಇದು ಏಶ್ಯಾದಲ್ಲಿರುವ ಅತ್ಯಂತ ದೊಡ್ಡ ಗುಲಾಬಿ ಉದ್ಯಾನವಾಗಿದೆ. ಜಾಕೀರ್ ಹುಸೈನ್ ಗುಲಾಬಿ ತೋಟವೆಂದು ಕರೆಯಲ್ಪಡುವ ಈ ಉದ್ಯಾನ ಸುಮಾರು 17 ಎಕ್ರೆ ಜಾಗದಲ್ಲಿದೆ. ಇದರಲ್ಲಿ ಸುಮಾರು 17 ಸಾವಿರ ವಿಧದ ಗಿಡಗಳಿದ್ದು, 1600 ವಿಧದ ಹೂಗಳಿವೆ. ಗುಲಾಬಿ ಹೂಗಳನ್ನು ಹೊರತುಪಡಿಸಿ ಈ ಉದ್ಯಾನದಲ್ಲಿರುವ ಬಹೆರಾ, ಕರ್ಪೂರ, ಬೆಲ್, ಹರಾರ್ ಮತ್ತು ಹಳದಿ ಗುಲ್ಮೊಹರ್ ನಂತಹ ಔಷಧಿಯ ಗಿಡಗಳು ಉದ್ಯಾನಕ್ಕೆ ಮತ್ತಷ್ಟು ಮೆರಗು ನೀಡಿದೆ.
ಅತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಈ ಉದ್ಯಾನದಲ್ಲಿ ಪ್ರತೀ ವರ್ಷ ಗುಲಾಬಿ ಹಬ್ಬ ನಡೆಯುತ್ತದೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವ ಹಾಗೂ ಸ್ಪರ್ಧೆಗಳಿಂದಾಗಿ ಇದು ಕೇವಲ ಸ್ಥಳೀಯರನ್ನು ಮಾತ್ರವಲ್ಲದೆ ಈ ಸಮಯದಲ್ಲಿ ಭೇಟಿ ನೀಡುವ ಪ್ರವಾಸಿಗರನ್ನು ಕೂಡ ಸೆಳೆಯುತ್ತದೆ. ಕಣ್ಣೀಗೆ ಮುದ ನೀಡುವಂತಹ ಗುಲಾಬಿ ಉದ್ಯಾನ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಇಲ್ಲಿಗೆ ದಿನಕ್ಕೆ ಐದು ಸಾವಿರ ಪ್ರವಾಸಿಗಳು ಭೇಟಿ ನೀಡುತ್ತಾರೆ.