ನಾಗಾಲ್ಯಾಂಡ್ ವಿಶ್ವವಿದ್ಯಾಲಯವು ಭಾರತದ ಕೇಂದ್ರ ವಿದ್ಯಾಲಯಗಳಲ್ಲೊಂದಾಗಿದ್ದು 1994ರಲ್ಲಿ ಅಸ್ತಿತ್ವಕ್ಕೆ ಬಂತು. ಇದರ ಕ್ಯಾಂಪಸ್ ಕೋಹಿಮಾ, ದೀಮಾಪುರ್, ಮೇಡ್ಜಿಪೇಮಾ ಮತ್ತು ಜುನೆಬೋತೋ ಪ್ರದೇಶದಲ್ಲೂ ಇದೆ. ಈ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯಾಲಯ ಲುಮಾಮಿ ಹಳ್ಳಿಯಲ್ಲಿದ್ದು ಇದು ನಾಗಾಲ್ಯಾಂಡಿನ ಜುನೆಬೋತೋ ಜಿಲ್ಲೆಯಲ್ಲಿದೆ.
ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 54 ಕಾಲೇಜುಗಳಿವೆ. ಅಂದಾಜು ಸುಮಾರು 25000 ವಿದ್ಯಾರ್ಥಿಗಳು ಪ್ರತಿ ವರ್ಷ ಇಲ್ಲಿ ನೊಂದಣಿ ಮಾಡಿಕೊಳ್ಳುತ್ತಾರೆ. ಈ ವಿಶ್ವವಿದ್ಯಾಲಯ ಮನುಷ್ಯ ಸ್ವಭಾವ ಮತ್ತು ಶಿಕ್ಷಣ, ಸಮಾಜ ವಿಜ್ಞಾನ, ಕ್ರುಷಿ ವಿಜ್ಞಾನ ಮತ್ತು ಗ್ರಾಮೀನ ಅಭಿವೃದ್ದಿ, ಇಂಜಿನಿಯರಿಂಗ್ ಮತ್ತು ಆಡಳಿತದ ಬಗ್ಗೆ ವಿಶೇಷ ಕೋರ್ಸನ್ನು ಹೊಂದಿದೆ.
ಇಲ್ಲಿನ ವಿಶ್ವವಿದ್ಯಾಲಯದಿಂದಾಗಿ ಜುನೆಬೋತೋ ನಗರವು ನಾಗಾಲ್ಯಾಂಡಿನ ಪ್ರಮುಖ ಜಿಲ್ಲೆಯಾಗಿದೆ. ಇದರಿಂದಾಗಿ ಇಂದು ಜುನೆಬೋತೋ ನಗರವು ನಾಗಾಲ್ಯಾಂಡಿನ ಸಾಂಸ್ಕೃತಿಕ ಕೇಂದ್ರವಾಗಿದ್ದು ನಾಗಾ ಬುಡಕಟ್ಟು ಜನಾಂಗದವರು ಕೂಡಾ ಇಲ್ಲಿ ಬೆರೆಯುತ್ತಾರೆ.
ಈ ವಿಶ್ವವಿದ್ಯಾಲಯವು ಹಚ್ಚ ಹಸಿರಿನ ಮತ್ತು ಪ್ರಶಾಂತ ವಾತಾವರಣದಲ್ಲಿದ್ದು ಶಿಕ್ಷಣಕ್ಕೆ ಅತ್ಯಂತ್ಯ ಪ್ರಶಸ್ತವಾಗಿದೆ. ಹೇಳಿ ಮಾಡಿಸಿದ ಹಾಗಿರುವ ಭೌಗೋಳಿಕ ವಾತಾವರಣ ಮತ್ತು ಅಪರಿಮಿತ ಹೂ, ವನಸ್ಪತಿ, ಪ್ರಾಣಿಗಳ ವಲಯ, ಕೃಷಿ ವಿಜ್ಞಾನ ಮತ್ತು ಗ್ರಾಮೀಣಾಭಿವೃದ್ದಿಗೆ ಸೂಕ್ತವಾಗಿದೆ.


Click it and Unblock the Notifications