ಯಲ್ಲಾಪುರದ ಮೇಲೆ ಹಾದು ಹೋಗುವ ಪ್ರವಾಸಿಗರು ಒಮ್ಮೆ ಅಲ್ಲಿನ ಕವಡಿಕೆರಿ ಅಥವ ಕೆರೆಯನ್ನು ನೋಡಲು ಹೋಗಬಹುದಾಗಿದೆ. ಇದು 62 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, ಯಲ್ಲಾಪುರದಿಂದ 20 ಕಿ.ಮೀ ದೂರದಲ್ಲಿ ಮತ್ತು ಮಾಗೋಡು ಜಲಪಾತದಿಂದ 9 ಕಿ.ಮೀ ದೂರದಲ್ಲಿ ಇದೆ. ಕವಡಿಕೆರಿಯ ಸುತ್ತ ನೋಡಬಯಸುವ ಪ್ರವಾಸಿಗರು ಈ ಕೆರೆಯನ್ನು ಸುತ್ತುವರಿದ ಹಲವು ಬೆಟ್ಟಗಳನ್ನು ನೋಡಬಹುದು. ಕವಡಿಕೆರಿಗೆ ಸಮೀಪದಲ್ಲಿಯೇ ಒಂದು ಪುರಾತನಕಾಲದ ದುರ್ಗಾ ದೇವಾಲಯವಿದೆ. ಇಲ್ಲಿಗೆ ಭೇಟಿ ಕೊಟ್ಟಾಗ ಪ್ರವಾಸಿಗರು ದೈತ್ಯ ಗಾತ್ರದ ಚಿಟ್ಟೆಗಳನ್ನು ಮತ್ತು ಕೆಂಪು ಹಾಗು ಕಪ್ಪು ಪುಚ್ಚದ ಬುಲ್ ಬುಲ್ ಹಕ್ಕಿಗಳನ್ನು ನೋಡಬಹುದು.


Click it and Unblock the Notifications