ಪುಂಗನೂರ್ ಕೆರೆಗೆ ಸಮೀಪದಲ್ಲೇ ಪರಿಸರ ಉದ್ಯಾನವನವಿದೆ. ಇದು ಸುಮಾರು 12 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. ಇಲ್ಲಿ ಬಂಡೆಗಲ್ಲುಗಳು ಇರುವ ಪ್ರದೇಶದಲ್ಲಿ ಬೆಳೆಯುವ ಅನೇಕ ತಳಿಯ ಸಸ್ಯಗಳನ್ನು ನಾವು ಕಾಣಬಹುದಾಗಿದೆ. ಇಲ್ಲಿ ಕೃತಕ ಜಲಪಾತವೂ ಇದೆ. ಇಲ್ಲಿ ಸ್ನಾನಕ್ಕೂ ಅನುಮತಿ ನೀಡಲಾಗಿದೆ. ಜೊತೆಗೆ ಇಲ್ಲಿರುವ ಮಕ್ಕಳ ಉದ್ಯಾನವನ ಮಕ್ಕಳ ಪ್ರಮುಖ ಆಕರ್ಷಣೆಯಾಗಿದೆ. ಸಂಗೀತ ಕಾರಂಜಿ, ಅಕ್ವೇರಿಯಂ, ಉದ್ಯಾನವನ, ಬಿದಿರಿನಿಂದ ಕಟ್ಟಿದ ಮನೆ, ಇಲ್ಲಿನ ಇತರೆ ಪ್ರಮುಖ ಆಕರ್ಷಣೆಗಳಾಗಿವೆ. ಇಲ್ಲಿನ ಸಂಗೀತ ಕಾರಂಜಿಯಲ್ಲಿ ಪ್ರಸಿದ್ಧ ಹಾಡುಗಳಿಗೆ ತಕ್ಕಂತೆ ಕಾರಂಜಿಯನ್ನು ಆಯೋಜನೆಗೊಳಿಸಲಾಗಿದೆ.
ಮೀನುಗಳ ಸಂಗ್ರಹಾಗಾರ ಅಕ್ವೇರಿಯಂ ಹಲವು ಬಗೆಯ ಮೀನುಗಳು ಮತ್ತು ಆಮೆಗಳಿಗೆ ಮನೆಯಾಗಿದೆ. ಪುಂಗನೂರ್ ಕೆರೆಯ ಸೌಂದರ್ಯ ಸವಿಯಲು ಮತ್ತು ಸಂಜೆಯ ಹೊತ್ತು ವಿಶ್ರಾಂತಿ ಪಡೆಯಲು ಇದು ಉತ್ತಮ ತಾಣವಾಗಿದೆ. ಈ ಉದ್ಯಾನವನವನ್ನು ಪ್ರವೇಶಿಸಲು 15 ರೂ ಗಳ ಪ್ರವೇಶ ಶುಲ್ಕವಿದೆ. ಮಕ್ಕಳಿಗೆ ಇದು 5 ರೂ ಗಳಾಗಿದೆ. ಸಂಗೀತ ಕಾರಂಜಿಯ ವೀಕ್ಷಣೆಗೆ 25 ರೂ ಗಳ ಪ್ರತ್ಯೇಕ ಶುಲ್ಕವನ್ನು ವಿಧಿಸಲಾಗಿದೆ. ಉದ್ಯಾನವನ ಬೆಳಗ್ಗೆ 8 ರಿಂದ ರಾತ್ರಿ 8 ರ ತನಕ ತೆರೆದಿರುತ್ತದೆ.


Click it and Unblock the Notifications