ನೇಪಾಳ ಮತ್ತು ಪಶ್ಚಿಮ ಚಂಪಾರಣ ಮಧ್ಯೆ ಇರುವ ಸುಮೇಶ್ವರ ಪರ್ವತ ಶ್ರೇಣೆಯಲ್ಲಿ ನೆಲೆನಿಂತಿರುವ ಐತಿಹಾಸಿ ಕೋಟೆ ಸುಮೇಶ್ವರ ಕೋಟೆ. ಕಡಿದಾದ ಪರ್ವತ ಶ್ರೇಣಿಯಲ್ಲಿದ್ದ ಕೋಟೆಯು ಈಗ ಅವಶೇಷ. ಕೋಟೆಯ ಅಳಿದುಳಿದ ಭಾಗಗಳನ್ನು ಚೆನ್ನಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಪ್ರವಾಸಿಗಳಿಗೆ ವೀಕ್ಷಣೆಗೆ ಯೋಗ್ಯವಾಗಿದೆ. ಹಿಮಾಲಯದ ಪರ್ವತ ಶ್ರೇಣಿಗಳಾದ ಧವಳಗಿರಿ, ಗೊಸಾಯಿನಾಥ ಮತ್ತು ಗೌರಿಶಂಕರವನ್ನು ಇಲ್ಲಿಂದ ಸುಲಭವಾಗಿ ವೀಕ್ಷಿಸಬಹುದು ಮತ್ತು ಇಲ್ಲಿಂದ ನೋಡಬಹುದಾದ ಅತ್ಯುತ್ತಮ ವೀಕ್ಷಣೆಯೆಂದು ಪರಿಗಣಿಸಲ್ಪಟ್ಟಿದೆ.


Click it and Unblock the Notifications