Search
  • Follow NativePlanet
Share
ಮುಖಪುಟ » ಸ್ಥಳಗಳು» ವಿಶಾಖಪಟ್ಟಣ

ವೈಜಾಗ್ - ಒಂದು ಸಂಪೂರ್ಣ ಪ್ರವಾಸಿ ತಾಣ

29

ಬಂದರು ಪಟ್ಟಣವಾದ ವಿಶಾಖಪಟ್ಟಣಂ ಗೆ ಇರುವ ಜನಪ್ರಿಯ ಹೆಸರೇ ವೈಜಾಗ್.  ಭಾರತದ ಆಗ್ನೇಯ ಕರಾವಳಿಯಲ್ಲಿರುವ ಇದು, ಆಂಧ್ರ ಪ್ರದೇಶದ ಎರಡನೇ ದೊಡ್ಡ ನಗರವಾಗಿದೆ. ಪ್ರಾಥಮಿಕವಾಗಿ ಒಂದು ಕೈಗಾರಿಕಾ ನಗರವಾಗಿರುವ ವೈಜಾಗ್ ತನ್ನ ಸುಂದರ ತೀರ,ರಮಣೀಯ ದಿಣ್ಣೆಗಳು, ಸಮೃದ್ಧ ಹಸಿರು ಮತ್ತು  ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಗಳಿಂದಾಗಿ  ಉತ್ತಮ ಪ್ರವಾಸಿ ತಾಣವಾಗಿಯೂ ಮಾರ್ಪಡುತ್ತಿರುವುದು ಸ್ವಾಗತಾರ್ಹ. ಹಿಂದೂಗಳ ಶೌರ್ಯ ದೇವತೆಯಾದ ವಿಶಾಖಾದಿಂದ ಈ ನಗರಕ್ಕೆ ವಿಶಾಖಪಟ್ಟಣಂ ಎಂಬ ಹೆಸರು ಬಂದಿದೆ. ಬಂಗಾಳ ಕೊಲ್ಲಿಯ ಕಡೆಗೆ ಮುಖಮಾಡಿರುವ ನಗರದ ಪೂರ್ವ ಭಾಗವು, ಪಶ್ಚಿಮ ಘಟ್ಟಗಳ ಬೆಟ್ಟಗಳ ನಡುವೆ ಅದ್ಭುತವಾಗಿ ಕಾಣಸಿಗುತ್ತದೆ. ಈ ನಗರವು ತನ್ನಲ್ಲಿನ ರಮಣೀಯ ತಾಣಗಳಿಂದಾಗಿ ಪೂರ್ವ ಕರಾವಳಿಯ ಗೋವಾ ಎಂಬ ಉಪನಾಮವನ್ನು ಪಡೆದಿದೆ. 

ಇತಿಹಾಸದ ಒಂದು ನೋಟ

ಪವಿತ್ರ ಪುಸ್ತಕಗಳ ಪ್ರಕಾರ ವಿಶಾಖಪಟ್ಟಣಂ ನಗರವು ಸಮಾರು 2000 ವರ್ಷಗಳ ಹಿಂದೆ ರಾಜ ವಿಶಾಖ ವರ್ಮಾ ನ ಆಳ್ವಿಕೆಯಲ್ಲಿತ್ತು. ಮಹಾಭಾರತ ಮತ್ತು ರಾಮಾಯಣದಂತಹ  ಮಹಾಕಾವ್ಯಗಳಲ್ಲಿಯೂ ಈ ನಗರದ ಹೆಸರನ್ನು ಉಲ್ಲೇಖಿಸಲಾಗಿದೆ. ಕ್ರಿಸ್ತ ಪೂರ್ವ  260 ರಲ್ಲಿ ಅಶೋಕನಿಂದ  ಆಳಲ್ಪಟ್ಟಿದ್ದ ನಗರವು ಕಳಿಂಗ ರಾಜ್ಯಕ್ಕೆ ಸೇರಿದ್ದಾಗಿತ್ತು. ಆನಂತರ ವಿಶಾಖಪಟ್ಟಣವು ಕ್ರಿಸ್ತಶಕ 1600 ರವರೆಗೆ ಉತ್ಕಲ ರಾಜ್ಯದ ಭಾಗವಾಗಿತ್ತು. ನಂತರ, ವೆಂಗಿ ರಾಜರಿಂದ ಆಳಲ್ಪಟ್ಟ ಆಂಧ್ರ ರಾಜ್ಯದ ಭಾಗವಾಗಿಯೂ ತದನಂತರ ಪಲ್ಲವ ರಾಜ್ಯದ ಭಾಗವಾಗಿಯೂ ಆಳ್ವಿಕೆಯನ್ನು ಕಂಡಿದೆ. ಮೊಘಲರು ಸಹ ಹೈದರಾಬಾದ್ ನಿಜಾಮರ ಮೂಲಕ 15 ಮತ್ತು 16 ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದರು. 18 ನೇ ಶತಮಾನದಲ್ಲಿ, ವಿಶಾಖಪಟ್ಟಣವು ಫ್ರೆಂಚ್ ಆಳ್ವಿಕೆಗೆ ಒಳಪಟ್ಟಿತ್ತು. 1804 ರಲ್ಲಿ, ವಿಶಾಖಪಟ್ಟಣಂ ಬಂದರಿನ ಬಳಿ ಫ್ರೆಂಚ್ ಮತ್ತು ಬ್ರಿಟೀಷ್ ಪಡೆಗಳ ಮಧ್ಯೆ ನಡೆದ  ಹೋರಾಟದ ಫಲವಾಗಿ ಈ ಪ್ರದೇಶವು ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿತು. ಹೈದರಾಬಾದನ ಬಂದರು ಬ್ರಿಟೀಷ್ ಆಳ್ವಿಕೆಯ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿತ್ತು. ವಿಶಾಖಪಟ್ಟಣಂ ಬ್ರಿಟೀಷ್ ಆಳ್ವಿಕೆಯಲ್ಲಿ ಮದ್ರಾಸ್ ಪ್ರಾಂತ್ಯದ ಭಾಗವಾಗಿತ್ತು. ಭಾರತದ ಸ್ವತಂತ್ರ್ಯಾ ನಂತರ, ವಿಶಾಖಪಟ್ಟಣಂ ಭಾರತದಲ್ಲಿ ದೊಡ್ಡ ಜಿಲ್ಲೆಯಾಗಿತ್ತು. ಈ ಜಿಲ್ಲೆಯನ್ನು ನಂತರದ ದಿನಗಳಲ್ಲಿ  ಸ್ರಿಕುಲಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಗಳೆಂಬ ಮೂರು ಜಿಲ್ಲೆಗಳಾಗಿ ವಿಂಗಡಿಸಲಾಯಿತು.

ಇದು ಒಂದು ಸ್ವಾಭಾವಿಕ ಸ್ವರ್ಗ

ವಿಶಾಖಪಟ್ಟಣವು ಪ್ರವಾಸಿಗರಿಗೆ ಸ್ವರ್ಗ ಸದೃಶವಾಗಿದೆ. ಇದು ಪ್ರವಾಸಿಗಳ ಆಸಕ್ತಿ ಮತ್ತು ಮನರಂಜನೆಗಾಗಿ ಹಲವಾರು ಸಂಪನ್ಮೂಲಗಳನ್ನು ಹೊಂದಿದೆ. ಸುಂದರ ಸಮುದ್ರ ತೀರಗಳಿಂದ ಹಿಡಿದು ಚಿತ್ರ ಸದೃಶ ಬೆಟ್ಟಗಳವರೆಗೆ, ಸ್ವಾಭಾವಿಕ ಕಣಿವೆಗಳಿಂದ ಹಿಡಿದು ಆಧುನಿಕ ನಗರ ವ್ಯವಸ್ಥೆಯವರೆಗೆ ಇದು ಪ್ರತಿಯೊಬ್ಬರಿಗೂ ಏನಾದರೂ ಆಸಕ್ತಿದಾಯಕ ದೃಶ್ಯಾವಳಿಗಳನ್ನು ಹೊಂದಿದೆ. ವಿಶಾಖಪಟ್ಟಣವು  ಶ್ರೀ ವೆಂಕಟೇಶ್ವರ ಕೊಂಡ, ರೋಸ್ ಹಿಲ್ ಮತ್ತು ದರ್ಗಾ ಕೊಂಡ ಎಂಬ ಬೆಟ್ಟಗಳಿಂದ ಸುತ್ತುವರೆದಿವೆ. ಇಲ್ಲಿನ ಪ್ರತಿ ಬೆಟ್ಟಗಳಲ್ಲಿಯೂ ವಿವಿಧ ಧರ್ಮಗಳ ಪುಣ್ಯಕ್ಷೇತ್ರಗಳು ನೆಲೆಸಿವೆ. ವೆಂಕಟೇಶ್ವರ ಬೆಟ್ಟದಲ್ಲಿ ಶಿವನ ದೇವಸ್ಥಾನವಿದ್ದರೆ, ರೋಸ್ ಹಿಲ್ ನಲ್ಲಿ  ವರ್ಜಿನ್ ಮೇರಿ ಚರ್ಚ್ ಮತ್ತು ದರ್ಗಾ ಕೊಂಡ ಇಸ್ಲಾಮಿಕ್ ಸಂತ ಬಾಬಾ ಇಶಾಕ್ ಮದಿನಾರ ಸಮಾಧಿಯನ್ನು ಹೊಂದಿದೆ. ರಿಷಿಕೊಂಡ ಬೀಚ್, ಗಂಗಾವರಂ ಬೀಚ್, ಭಿಮ್ಲಿ ಮತ್ತು ಯರಡ ಬೀಚ್ ಗಳು ನಗರದ ಪೂರ್ವ ಭಾಗದಲ್ಲಿನ ಕಡಲತೀರಗಳು. ಇತರ ಪ್ರವಾಸಿ ಆಕರ್ಷಣೆಗಳಲ್ಲಿ ಕೈಲಾಸಗಿರಿ ಹಿಲ್ ಪಾರ್ಕ್, ಸಿಂಹಾಚಲಂ ಬೆಟ್ಟಗಳು, ಅರಕು ಕಣಿವೆ, ಕಂಬಲಕೊಂಡ ವನ್ಯಮೃಗ ಅಭಯಾರಣ್ಯ, ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, ವಾರ್ ಮೆಮೋರಿಯಲ್ ಮತ್ತು ನೌಕಾ ವಸ್ತುಸಂಗ್ರಹಾಲಯಗಳು ಸೇರಿವೆ. ಇಲ್ಲಿನ ಜಗದಂಬಾ ಸೆಂಟರ್ ಮಾಲ್ ಶಾಪಿಂಗ್ ಗೆ ಪ್ರಸಿದ್ಧವಾಗಿದೆ. ವಿಶಾಖಪಟ್ಟಣಂ ಕಡೆಗೆ ಪಯಣ

ವಿಶಾಖಪಟ್ಟಣಂನಲ್ಲಿನ ಅತಿಥಿ ಸತ್ಕಾರ ಅತ್ಯಂತ ಸ್ಪರ್ಧಾತ್ಮಕ ಮತ್ತು ಉತ್ಕೃಷ್ಟವಾಗಿದೆ. ಪ್ರಯಾಣಿಕರ ಜೇಬಿನ ಮಿತಿಯಲ್ಲೇ ಅನೇಕ ಸೌಲಭ್ಯಗಳಿದ್ದು ಪ್ರವಾಸಿಗರು ಸಂಪೂರ್ಣವಾಗಿ ಇವುಗಳನ್ನು  ಆನಂದಿಸಬಹುದು. ವಿಶಾಖಪಟ್ಟಣಂ ಒಂದು ಜನಪ್ರಿಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವದರಿಂದ  ಪ್ರಯಾಣಿಕರು ಸೌಲಭ್ಯಗಳು ಸಿಗದೇ ನಿರಾಶರಾಗುವದನ್ನು ತಪ್ಪಿಸಲು ಮುಂಗಡ ಸ್ಥಳ ಕಾಯ್ದಿರಿಸುವ ಪದ್ಧತಿಯನ್ನು ಜಾರಿತರಲಾಗಿದೆ. ವಿಶಾಖಪಟ್ಟಣಂ ಒಂದು ಉತ್ತಮ ಸಂಪರ್ಕ ಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು ವಿಮಾನಯಾನದಿಂದ ಭಾರತದ ಅತ್ಯಂತ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ವಿಮಾನ ನಿಲ್ದಾಣ ನಗರ ಕೇಂದ್ರದಿಂದ 16 ಕಿಮೀ ದೂರದಲ್ಲಿದ್ದು, ವಿಮಾನನಿಲ್ದಾಣದ ಹೊರಗೆ  ಟ್ಯಾಕ್ಸಿಗಳು ಸುಲಭವಾಗಿ ಲಭ್ಯವಿವೆ. ವಿಶಾಖಪಟ್ಟಣಂನಿಂದ  ಭಾರತದ ಎಲ್ಲಾ ನಗರಗಳಿಗೆ ರೈಲು ಸಂಪರ್ಕ ಸಹ ಇದೆ.  ಬಸ್ ಅಥವಾ ರಸ್ತೆ ಸಾರಿಗೆ ದಕ್ಷಿಣ ಭಾರತದ ಅನೇಕ ಪ್ರಮುಖ ನಗರಗಳಿಗೆ ವಿಶಾಖಪಟ್ಟಣಂ ನಿಂದ ಸಂಪರ್ಕಿಸುತ್ತದೆ ಮತ್ತು ಆರ್ಥಿಕವಾಗಿಯೂ ಬಸ್ ಪ್ರಯಾಣ ಕಡಿಮೆ ಖರ್ಚಿನದ್ದಾಗಿದೆ. ವಿಶಾಖಪಟ್ಟಣಂ ಭೇಟಿ ನೀಡಲು ವರ್ಷದ ಅತ್ಯುತ್ತಮ ಸಮಯ ಮಾನ್ಸೂನ್  ನಂತರದ ಕಾಲ ಮತ್ತು  ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಚಳಿಗಾಲದ ಋತುವಿನಲ್ಲಿ. ನಗರವು ಮಾನ್ಸೂನ್ ಅವಧಿಯಲ್ಲಿ ಭಾರಿ ಮಳೆ ಮತ್ತು ಬೇಸಿಗೆಯಲ್ಲಿ ಸುಡುವ ತಾಪಮಾನವನ್ನು ಅನುಭವಿಸುತ್ತದೆ. ಹವಾಮಾನದಲ್ಲಿನ ಇಂತಹ ವೈಪರಿತ್ಯದಿಂದಾಗಿ ವರ್ಷದ ಈ ಕಾಲವು ಪ್ರವಾಸಿ ಚಟುವಟಿಕೆಗಳಿಗೆ  ತಕ್ಕದಲ್ಲ. ವಿಸಖ ಉತ್ಸವ್ ಇದು ವಿಶಾಖಪಟ್ಟಣದಲ್ಲಿ ಆಚರಿಸುವ ಪ್ರವಾಸೋದ್ಯಮ ಪ್ರಚಾರ ಹಬ್ಬ. ವಿಶಾಖಪಟ್ಟಣದ ಪ್ರವಾಸಕ್ಕೆ ಸೂಕ್ತ ಕಾಲವಾದ  ಡಿಸೆಂಬರ್-ಜನವರಿ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ವಿಶಾಖಪಟ್ಟಣವು ಪ್ರತಿ ಪ್ರಯಾಣಿಕನೂ ಭೇಟಿ ಮಾಡಬೇಕಾದ ರಮಣೀಯ ತಾಣವಾಗಿದೆ.

ವಿಶಾಖಪಟ್ಟಣ ಪ್ರಸಿದ್ಧವಾಗಿದೆ

ವಿಶಾಖಪಟ್ಟಣ ಹವಾಮಾನ

ಉತ್ತಮ ಸಮಯ ವಿಶಾಖಪಟ್ಟಣ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಿಶಾಖಪಟ್ಟಣ

  • ರಸ್ತೆಯ ಮೂಲಕ
    ವಿಶಾಖಪಟ್ಟಣವು ಸುವರ್ಣ ಚತುಷ್ಪಥದ ಒಂದು ಭಾಗವಾದ ಎನ್ ಹೆಚ್ 5 ಮೇಲಿದ್ದು, ನಗರವು ವಿಸ್ತಾರವಾದ ರಸ್ತೆ ಜಾಲವನ್ನು ಹೊಂದಿದೆ. ದಕ್ಷಿಣ ಭಾರತ ಮತ್ತು ಮಧ್ಯ ಭಾರತದ ಪ್ರಮುಖ ನಗರಗಳಿಂದ ವಿಶಾಖಪಟ್ಟಣದಲ್ಲಿ ನಿರಂತರವಾಗಿ ಸರ್ಕಾರಿ ಮತ್ತು ಖಾಸಗಿ ಬಸಗಳು ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    1894 ರಿಂದಲೂ ವಿಶಾಖಪಟ್ಟಣಂದಲ್ಲಿ ರೈಲು ನಿಲ್ದಾಣವು ಕಾರ್ಯಮಾಡಿತ್ತಿದೆ. ಈ ರೈಲ್ವೆ ನಿಲ್ದಾಣವು ದೆಹಲಿ, ಮುಂಬೈ, ಕೋಲ್ಕತಾ, ಚೆನೈ ಮತ್ತು ಬೆಂಗಳೂರು ಸೇರಿದಂತೆ ಭಾರತದ ಹೆಚ್ಚಿನ ನಗರಗಳಿಗೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನಾಗಿ ಪರಿವರ್ತಿಸಲಾಗಿರುವ ವಿಶಾಖಪಟ್ಟಣಂ ವಿಮಾನ ನಿಲ್ದಾಣವು, ಭಾರತದ ಅತ್ಯಂತ ಪ್ರಮುಖ ನಗರಗಳಿಗೆ ಹಾಗೂ ಸಿಂಗಪುರ್ ಮತ್ತು ದುಬೈ ದೇಶಗಳಿಗೆ ಸಂಪರ್ಕ ಹೊಂದಿದೆ. ನಗರದಿಂದ 16 ಕಿಮೀ ದೂರದಲ್ಲಿರುವ ವಿಮಾನನಿಲ್ದಾಣದಿಂದ ನಗರಕ್ಕೆ ಕ್ಯಾಬ್ ಗಳು ಸುಲಭವಾಗಿ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City