ಪೂರ್ವ ಕರಾವಳಿಯಲ್ಲಿರುವ ರಾಮಕೃಷ್ಣ ಬೀಚ್, ವಿಶಾಖಪಟ್ಟಣಂ ನಗರದ ಜನಪ್ರಿಯ ಬೀಚ ಆಗಿದ್ದು ಬಂಗಾಳ ಕೊಲ್ಲಿಯ ತೀರದಲ್ಲಿದೆ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ನೋಟ ಅದ್ಬುತವಾಗಿರುತ್ತದೆ. ರಾಮಕೃಷ್ಣ ಬೀಚ್ ಮತ್ತು ಅದರ ಅವಳಿ ಬೀಚಾದ ಲಾಸನ್ ಬೇ ಬೀಚ್ಗಳು ತಮ್ಮ ಸುತ್ತಮುತ್ತಲಿನ ನೈಸರ್ಗಿಕ ಪರಿಭಾಷೆಯಲ್ಲಿ ಅದ್ಭುತ ಪ್ರಾಕೃತಿಕ ಸೌಂದರ್ಯವನ್ನು ಒದಗಿಸುತ್ತದೆ. ರಾಮಕೃಷ್ಣ ಬೀಚ್ ಅತಿ ದೊಡ್ಡ ಕಡಲ್ ಕೋಟೆಯನ್ನೂ ಹೊಂದಿದೆ.
1971 ರ ಇಂಡೋ ಪಾಕ್ ಯುದ್ಧದ ಸೈನಿಕರಿಗೆ ಮೀಸಲಾಗಿರುವ ಯುದ್ಧ ಸ್ಮಾರಕ, ವಾಡು ಪಾರ್ಕ್, ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, ಮತ್ಸ್ಯದರ್ಶಿನಿ ಮತ್ತು ಕಾಳಿ ದೇವಸ್ಥಾನ ಗಳಂತಹ ಇತರ ಪ್ರವಾಸಿ ತಾಣಗಳು ಬೀಚ್ ಗೆ ಸಮೀಪದಲ್ಲೇ ಇವೆ. ಗಾಳಿ ಮತ್ತು ನೀರಿನ ಸರ್ಫಿಂಗ್ ಮತ್ತು ಸಾಂಪ್ರದಾಯಿಕ ಹಡಗುಗಳಮೇಲೆ ಆಳ ಸಮುದ್ರದ ಆಂಗ್ಲಿಂಗ್ ಗಳಂತಹ ವಿವಿಧ ಜಲ ಕ್ರೀಡೆಗಳು ಈ ಬೀಚ್ ನಲ್ಲಿ ಲಭ್ಯವಿವೆ. ರಾಮಕೃಷ್ಣ ಬೀಚ್ ನಲ್ಲಿ ಸನ್ ಬಾತ್ ಗೂ ಅನುಮತಿ ಇದೆ. ಈ ಚಟುವಟಿಕೆಗಳಿಂದಾಗಿ ರಾಮಕೃಷ್ಣ ಬೀಚ್ ಪ್ರವಾಸಿಗಳ ನಡುವೆ ತುಂಬಾ ಜನಪ್ರಿಯವಾಗಿದೆ.