Search
 • Follow NativePlanet
Share
ಮುಖಪುಟ » ಸ್ಥಳಗಳು» ವೇಣೂರು

ವೇಣೂರು - ಯಾತ್ರೆಗೂ ಹಾಗು ಪ್ರವಾಸಕ್ಕೂ...

4

ವೇಣೂರು ಜೈನ ಸಮುದಾಯದ ಒಂದು ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಗುರಪುರ ನದಿ ದಂಡೆಯ ಮೇಲಿರುವ ಈ ಚಿಕ್ಕ ಪಟ್ಟಣವು ಈ ದಿನಗಳಲ್ಲಿ ಅಷ್ಟೊಂದು ಸುದ್ದಿಯಲ್ಲಿ ಇಲ್ಲದೆ ಹೊದರೂ ಇತಿಹಾಸದ ಪ್ರಕಾರ ಇದೊಂದು ಪ್ರಗತಿಪರ ನಗರವಾಗಿದ್ದು ಅಜಿಲ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿತ್ತು.

 

ಜೈನ ಸಮುದಾಯದ ಜನಪ್ರಿಯವಾದ ಹೆಗ್ಗುರುತು

ಆದುದರಿಂದ ಇದು ಧಾರ್ಮಿಕ ಹಾಗು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪಟ್ಟಣದ ಪ್ರಮುಖ ಆಕರ್ಷಣೆ ಎಂದರೆ 35 ಅಡಿ ಎತ್ತರದ ಭಗವಾನ್ ಗೊಮ್ಮಟೇಶ್ವರನ ಪ್ರತಿಮೆ. ಈ ಪ್ರತಿಮೆಯನ್ನು 1604 ರಲ್ಲಿ ಜೈನ ರಾಜನಾದ ತಿಮ್ಮಣ್ಣ ಅಜಿಲನು ಪ್ರತಿಷ್ಠಾಪಿಸಿದ್ದು, ಇಡಿ ಕರ್ನಾಟಕದಲ್ಲಿ ಕಾಣಸಿಗುವ ನಾಲ್ಕು ಗೊಮ್ಮಟೇಶ್ವರನ ಏಕಶಿಲಾ ಪ್ರತಿಮೆಗಳಲ್ಲಿ ಇದು ಒಂದಾಗಿದೆ.

ಅನ್ವೇಷಿಸಲು ಅಥವಾ ವೀಕ್ಷಿಸಲು ಯೋಗ್ಯವಾಗಿರುವ ಇನ್ನು ಹಲವಾರು ಜೈನ ಬಸದಿಗಳನ್ನು ವೇಣೂರಿನಲ್ಲಿ ಕಾಣಬಹುದು.ಇಷ್ಟೆ ಅಲ್ಲದೆ ಪುರಾತನ ಕಾಲದ 7 ದೇವಸ್ಥಾನಗಳನ್ನು ಇಲ್ಲಿ ನೋಡಬಹುದಾಗಿದ್ದು ಆ ಕಾಲದ ವಾಸ್ತು ಶಿಲ್ಪ ಕಲೆಯ ವೈಭವವನ್ನು ಆಸ್ವಾದಿಸಬಹುದು. ಇದರಲ್ಲಿ ಎರಡು ದೇವಸ್ಥಾನಗಳು ಗೊಮ್ಮಟೇಶ್ವರನ ಎರಡು ಬದಿಯಲ್ಲಿವೆ. ಇನ್ನು ಪ್ರಾಕೃತಿಕವಾಗಿ ವೇಣೂರು ತನ್ನ ಸುತ್ತ ಸಹ್ಯಾದ್ರಿ ಬೆಟ್ಟದ ಶ್ರೇಣಿಯನ್ನು ಹೊಂದಿದ್ದು ನೋಡಲು ನಯನಮನೋಹರವಾಗಿದೆ. ಜೈನ ಸಮುದಾಯದ ಪ್ರಮುಖ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕಾರ್ಕಳಕ್ಕೆ ವೇಣೂರು ಹತ್ತಿರದಲ್ಲಿದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದು, ಮಂಗಳೂರು, ಉಡುಪಿ ಹಾಗು ರಾಜ್ಯದ ಇತರೆ ಸಾರಿಗೆ ಬಸ್ಸುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ವೇಣೂರು ಪ್ರಸಿದ್ಧವಾಗಿದೆ

ವೇಣೂರು ಹವಾಮಾನ

ಉತ್ತಮ ಸಮಯ ವೇಣೂರು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ವೇಣೂರು

 • ರಸ್ತೆಯ ಮೂಲಕ
  ಮಂಗಳೂರು ಹಾಗು ಅದರ ಸುತ್ತಮುತ್ತಲಿನ ಪಟ್ಟಣಗಳಿಂದ ವೇಣೂರಿಗೆ ಹಲವಾರು ಸರಕಾರಿ, ಖಾಸಗಿ ಬಸ್ಸುಗಳು ಲಭ್ಯವಿದ್ದು, ಪ್ರಯಾಣಿಕರು ಇದರ ಸದುಪಯೋಗವನ್ನು ಮಾಡಿಕೊಳ್ಳಬಹುದು. ಇನ್ನು ಕಾರು ಮುಂತಾದ ಲಕ್ಸುರಿ ವಾಹನಗಳಲ್ಲಿ ಪ್ರಯಾಣಿಸಲು ಇಷ್ಟಪಡುವ ಪ್ರವಾಸಿಗರು ತಮ್ಮ ಶಕ್ತ್ಯಾನುಸಾರ ಲಭ್ಯವಿರುವ ವಿವಿಧ ಬಗೆಯ ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡು ಪ್ರಯಾಣಿಸಬಹುದಾಗಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ವೇಣೂರಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಮಂಗಳೂರು ರೈಲು ನಿಲ್ದಾಣ. ಈ ರೈಲು ನಿಲ್ದಾಣವು ದೇಶದ ಇತರೆ ಪ್ರಮುಖ ಪಟ್ಟಣಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ನಿಲ್ದಾಣದಿಂದ ವೇಣೂರಿಗೆ ತಲುಪಲು ಬಸ್ಸು,ಟ್ಯಾಕ್ಸಿ ಹಾಗು ಕ್ಯಾಬ್ ಗಳ ಸೌಲಭ್ಯವನ್ನು ಪ್ರವಾಸಿಗರು ಪಡೆಯಬಹುದು.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  50 ಕಿ.ಮೀ ದೂರದಲ್ಲಿರುವ ಮಂಗಳೂರು ವಿಮಾನ ನಿಲ್ದಾಣವು ವೇಣೂರಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ನಿಲ್ದಾಣದಿಂದ ವೇಣೂರಿಗೆ ತಲುಪಲು ಟ್ಯಾಕ್ಸಿ ಹಾಗು ಕ್ಯಾಬ್ ಗಳ ಸೌಲಭ್ಯ ಪಡೆಯಬಹುದು. ಇನ್ನು ಹೊರದೇಶದ ಪ್ರವಾಸಿಗರು ಬರಬೇಕೆಂದರೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ನಿಲ್ದಾಣವಾಗಿದ್ದು 290 ಕಿ.ಮೀ ಅಂತರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 Jan,Thu
Return On
28 Jan,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
27 Jan,Thu
Check Out
28 Jan,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
27 Jan,Thu
Return On
28 Jan,Fri

Near by City