ಧರ್ಮಸ್ಥಳ – ಧಾರ್ಮಿಕ ಸಹಿಷ್ಣುತೆಯ ನಾಡು

ನೇತ್ರಾವತಿ ನದಿಯ ದಡದಲ್ಲಿ, ಪಶ್ಚಿಮ ಘಟ್ಟಗಳ ಮಧ್ಯಭಾಗದಲ್ಲಿರುವ ದೇವಾಲಯ ಗ್ರಾಮ, ಧರ್ಮಸ್ಥಳ ಪೌರಾಣಿಕ ಹಾಗೂ ಧಾರ್ಮಿಕ ಮಹತ್ವವನ್ನು ಒಳಗೊಂಡಿದೆ. ಈ ಹಳ್ಳಿಯು ಭವ್ಯವಾದ ಮಂಜುನಾಥೇಶ್ವರ ದೇವಾಲಯದ ನೆಲೆಯಾಗಿದೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯ ಅಲ್ಲಿರುವ ಬಂಗಾರದ ಲಿಂಗದಿಂದಾಗಿ ಹೆಸರುವಾಸಿಯಾಗಿದೆ.

 

ದೇವಾಲಯಗಳು ಮತ್ತು ಬಸದಿಗಳ ಬಗ್ಗೆ

ಧರ್ಮಸ್ಥಳವು ಧಾರ್ಮಿಕ ಸಹಬಾಳ್ವೆಗೆ ಉದಾಹರಣೆಯಾಗಿದೆ. ಈ ದೇವಾಲಯವು ಕೇವಲ ಅದರ ರಚನೆಯಿಂದ ಮಾತ್ರ ಅಲ್ಲದೆ, ಈ ದೇವಸ್ಥಾನವನ್ನು ಜೈನ ಧರ್ಮದವರು ನಡೆಸುತ್ತಿದ್ದು, ಜೊತೆಯಲ್ಲಿ ದೈನಂದಿನ ಪೂಜೆಗಳು ಹಿಂದೂ ಪುರೋಹಿತರಿಂದ ನೆರವೇರಿಸಲಾಗುತ್ತದೆ ಎಂಬ ಸತ್ಯ ಸಂಗತಿಯಿಂದಲೂ ಕೂಡ ಪ್ರಸಿದ್ದಿಯಾಗಿದೆ. 8 ಜೈನ ಬಸದಿಗಳು ಅಲ್ಲದೆ 11 ಮೀಟರ್ ಎತ್ತರವಿರುವ ಬಾಹುಬಲಿಯ ಮೂರ್ತಿಯು ಇಲ್ಲಿನ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಮೂರ್ತಿಯು ಒಂದೇ ಬಂಡೆಯಿಂದ ಕೆತ್ತಲ್ಪಟ್ಟಿದ್ದು 175 ಟನ್ ಗಳಷ್ಟು ಭಾರವಿದೆ.

ಈ ಗ್ರಾಮವು ಹಲವಾರು ಪ್ರಾಚೀನ ಹಸ್ತಪ್ರತಿಗಳ ಭಂಡಾರವಾಗಿದೆ. ಇವೆಲ್ಲವುಗಳನ್ನು ಧರ್ಮಸ್ಥಳದ ಒಂದು ಪುರಾತತ್ವ ಜಾಗದಲ್ಲಿ  ಸಂಗ್ರಹಿಸಲ್ಪಟ್ಟಿದ್ದು ಮತ್ತು ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಣೆ ಮಾಡಲಾಗಿದೆ. ಹಲವಾರು ವಿಂಟೇಜ್ ಕಾರು ಪ್ರೇಮಿಗಳನ್ನು ಆಕರ್ಷಿಸುವ ಒಂದು ಅನನ್ಯ ಕಾರ್ ಮ್ಯೂಸಿಯಂ ಕೂಡ ಇದೆ.

ಧರ್ಮಸ್ಥಳವು ಬೆಂಗಳೂರಿನಿಂದ 300 ಕಿಮೀ ದೂರವಿದೆ ಆದರೂ ಸುಲಭವಾಗಿ ತಲುಪಬಹುದಾಗಿದೆ. ಈ ನಗರವು ಉಡುಪಿಯಿಂದ 100 ಕಿಮೀ ಹಾಗು ಮಂಗಳೂರಿನಿಂದ 70 ಕಿಮೀ ದೂರವಿದೆ.  ಬಹಳಷ್ಟು ಬಸ್ಸುಗಳು ಯಾತ್ರಿಗಳನ್ನು ದಿನನಿತ್ಯವೂ ಈ ಹಳ್ಳಿಗೆ ತಲುಪಿಸುತ್ತವೆ. ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲಿನ ಪ್ರಯಾಣ 6 ಘಂಟೆಯ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ.

Please Wait while comments are loading...