Search
 • Follow NativePlanet
Share
ಮುಖಪುಟ » ಸ್ಥಳಗಳು » ಧರ್ಮಸ್ಥಳ » ಆಕರ್ಷಣೆಗಳು » ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ

ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ, ಧರ್ಮಸ್ಥಳ

9

ಧರ್ಮಸ್ಥಳಕ್ಕೆ ಪ್ರವಾಸ ಕೈಗೊಂಡ ಪ್ರವಾಸಿಗರು, ರತ್ನಗಿರಿ ಬೆಟ್ಟದ ಪಶ್ಚಿಮದಲ್ಲಿ ಸ್ಥಾಪಿತವಾಗಿರುವ ಧರ್ಮಸ್ಥಳ ದೇವಾಲಯಕ್ಕೆ 'ಭೇಟಿ ನೀಡಲೆಬೇಕು'. ಈ ದೇವಾಲಯವನ್ನು 500 ವರ್ಷಗಳ ಹಿಂದೆ ಜೈನ ಮುಖ್ಯಸ್ಥ  ಬಿರ್ಮಣ್ಣ ಪೆರ್ಗಡೆ ಮೂಲಕ ನಿರ್ಮಿಸಲಾಯಿತು. ಧರ್ಮಸ್ಥಳ ದೇವಾಲಯವು ಶಿವನ ಸುವರ್ಣ ಲಿಂಗವಿರುವ ಪುಣ್ಯ ಕ್ಷೇತ್ರ. ಭಗವಾನ್ ಶಿವನ ಅವತಾರವಾದ, ಶ್ರೀ ಮಂಜುನಾಥೇಶ್ವರ ಅಣ್ಣಪ್ಪ ಸ್ವಾಮಿ ಈ ದೇವಾಲಯದ ಮುಖ್ಯ ದೇವತೆ.   

ಈ ಯಾತ್ರಾ ಸ್ಥಳದಲ್ಲಿ ಇರುವ ಲಿಂಗವನ್ನು ಮಂಗಳೂರು ಹತ್ತಿರ ಇರುವ ಕದ್ರಿ ಎಂಬ ಸ್ಥಳದಿಂದ ತರಲಾಗಿದೆ. ಈ ಸ್ಥಳವನ್ನು ತಲುಪಿದ ಮೇಲೆ, ಪ್ರವಾಸಿಗರಿಗೆ ಲಿಂಗದ ಪಕ್ಕದಲ್ಲಿ ಇರಿಸಲಾಗಿರುವ ನರಸಿಂಹ ಸಾಲಿಗ್ರಾಮ (ಭಗವಾನ್ ವಿಷ್ಣುವಿನ ಒಂದು ಅವತಾರ)ವನ್ನು ನೋಡುವ ಅವಕಾಶ ದೊರಯುತ್ತದೆ. ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ಮಹಾ ಗಣಪತಿ ಮತ್ತು ದೇವಿ ಅಮ್ಮನವರು ಅಥವಾ ಪಾರ್ವತಿಯ ದೇಗುಲಗಳಿವೆ. ಜೊತೆಗೆ, ಈ ದೇವಾಲಯವು ನಾಲ್ಕು ಧರ್ಮ ದೈವಗಳಾದ (ಧರ್ಮವನ್ನು ಕಾಯುವ ಆತ್ಮಗಳು), ಕನ್ಯಾಕುಮಾರಿ, ಕಲರ್ಕಾಯಿ, ಕಾಲರಾಹು ಮತ್ತು ಕುಮಾರಸ್ವಾಮಿಯ ದೇಗುಲಗಳು ಮತ್ತು ಚಿತ್ರಗಳನ್ನು ಹೊಂದಿದೆ.

ಕೇರಳದ ಇತರ ದೇವಾಲಯಗಳ ರೀತಿ ಧರ್ಮಸ್ಥಳ ದೇವಾಲಯದ ಒಳವೃತ್ತ, ಮರದ ಕಟ್ಟಿಗೆಯನ್ನು ಬಳಸಿ ಕಟ್ಟಲಾಗಿದೆ. ಈ ದೇವಾಲಯದ ಬಗ್ಗೆ ಇರುವ ಅಸಾಮಾನ್ಯ ವಿಷಯವೆಂದರೆ ಜೈನ ಧರ್ಮದವರು ಆಡಳಿತ ನಿರ್ವಹಿಸುತ್ತಾರೆ ಮತ್ತು ಪೂಜೆಯನ್ನು ಮಾಧ್ವ  ಕ್ರಮದಲ್ಲಿ ಹಿಂದೂ ಪುರೋಹಿತರು ಆಯೋಜಿಸುತ್ತಾರೆ. ಭಕ್ತರು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ಮತ್ತು ಸಂಜೆ 6.30 ರಿಂದ 8.30ರ ವರೆಗೆ ಧರ್ಮಸ್ಥಳ ದೇವಾಲಯಕ್ಕೆ ಭೇಟಿ ನೀಡಬಹುದು.

ಈ ದೇವಾಲಯದ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ, ಇದೊಂದು ಧಾರ್ಮಿಕವಾಗಿ ನ್ಯಾಯಾಲಯದ ಮಹತ್ವವುಳ್ಳ ದೇವಸ್ಥಾನವಾಗಿದ್ದು, ಜನರು ಆಣೆ-ಪ್ರಮಾಣಗಳನ್ನು ಮಾಡಲು ಇಲ್ಲಿಗೆ ಬರುತ್ತಾರೆ. ಇಲ್ಲಿ ಪ್ರಮಾಣ ಮಾಡಿದಾಗ ಸತ್ಯವನ್ನೆ ಹೇಳುತ್ತಾರೆ ಎಂಬುದು ಗಾಢವಾದ ನಂಬಿಕೆ.

One Way
Return
From (Departure City)
To (Destination City)
Depart On
23 May,Thu
Return On
24 May,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 May,Thu
Check Out
24 May,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 May,Thu
Return On
24 May,Fri
 • Today
  Dharmasthala
  30 OC
  86 OF
  UV Index: 8
  Partly cloudy
 • Tomorrow
  Dharmasthala
  27 OC
  81 OF
  UV Index: 6
  Moderate rain at times
 • Day After
  Dharmasthala
  27 OC
  80 OF
  UV Index: 6
  Light rain shower

Near by City