Search
  • Follow NativePlanet
Share

ವರ್ಕಾ ಬೀಚ್ : ಛಾಯಾಗ್ರಾಹಕರ ಸ್ವರ್ಗ

9

ದಕ್ಷಿಣ ಗೋವಾದಲ್ಲಿ ಕಂಡು ಬರುವ ಕೋಲ್ವಾ ಕಡಲ ತೀರದ ಹಾಗೆ ದೊಡ್ಡ ಪ್ರಮಾಣದಲ್ಲಿ ಇರದೆ ಹೋದರೂ ವರ್ಕಾ ಬೀಚ್ ಉತ್ತಮವಾದ ಅನುಭವವನ್ನು ಒದಗಿಸುವುದರಲ್ಲಿ ಕಮ್ಮಿ ಏನೂ ಇಲ್ಲ. ಶ್ವೇತ ವರ್ಣದ ಮರಳು ಮತ್ತು ಪಾಮ್ ಗಿಡಗಳನ್ನು ಹೊತ್ತ ಈ ಕಡಲ ತೀರವು ಮಧ್ಯಾಹ್ನದ ಹೊತ್ತನ್ನು ಆರಾಮದಾಯಕವಾಗಿ ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಇಷ್ಟೆ ಅಲ್ಲ ಈ ಕಡಲ ತೀರದಲ್ಲಿ ಕೈಗೆಟುಕುವ ಬೆಲೆಯಲ್ಲಿ ವಿವಿಧ ಬಗೆಯ ಪಾನೀಯಗಳು, ಸಾಂಪ್ರದಾಯಿಕ ಶೈಲಿಯ ಗೋವಾದ ತಿಂಡಿ ತಿನಿಸುಗಳು ಕೂಡ ದೊರೆಯುತ್ತವೆ. ಈ ಕಡಲ ತೀರವು ವರ್ಕಾ ಎಂಬ ಬೆಸ್ತ ಹಳ್ಳಿಯಲ್ಲಿದೆ. ಇಲ್ಲಿ ಬಹುಸಂಖ್ಯೆಯಲ್ಲಿ ಬೆಸ್ತರು ತಮ್ಮ ಕಾರ್ಯವಾದ ಮೀನು ಹಿಡಿಯುವಿಕೆಯಲ್ಲಿ ತೊಡಗಿಕೊಂಡಿರುವುದನ್ನು ಗಮನಿಸಬಹುದು. ತುಂಬಾ ಸ್ನೇಹ ಜೀವಿಗಳಾದ ಇಲ್ಲಿನ ಬೆಸ್ತರು ಒಮ್ಮೊಮ್ಮೆ ನಿಮಗೆ ಕೈಗೆಟುಕುವ ದರದಲ್ಲಿ ಮೀನುಗಳನ್ನು ಮಾರುವುದು ಉಂಟು! ಇಷ್ಟೆ ಅಲ್ಲ...ಛಾಯಾಗ್ರಾಹಕರಿಗೂ ಕೂಡ ಇದೊಂದು ಸ್ವರ್ಗವೆಂದೇ ಹೇಳಬಹುದು.

ಪಕ್ಕದ ಕೋಲ್ವಾ ಪ್ರದೇಶದಲ್ಲಿ ಜರುಗುವ ಫಾಮಾ ಉತ್ಸವದ ಸಡಗರವು ವರ್ಕಾ ಕಡಲ ತೀರದಲ್ಲೂ ಹರಡಿರುವುದನ್ನು ಕಾಣಬಹುದಾಗಿದೆ. ವರ್ಷಕ್ಕೊಮ್ಮೆ ಜರುಗುವ ಈ ಉತ್ಸವದಲ್ಲಿ ಭಕ್ತರು ಹರ್ಷದಿಂದ ಪಾಲ್ಗೊಂಡು ಮೆನಿನೊ ಜೀಸಸ್ ಪ್ರತಿಮೆ ಎದುರು ಪ್ರಾರ್ಥಿಸಿ ಪುನೀತರಾಗುತ್ತಾರೆ. ಈ ಪ್ರತಿಮೆಯು ಕೋಲ್ವಾದಲ್ಲಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ವರ್ಕಾ ಪ್ರದೇಶವು ನೋಡಲು ಮನೋಹರವಾಗಿರುವುದರಿಂದ ನೀವು ಅದರ ಭೇಟಿಯನ್ನು ತಪ್ಪಿಸಿಕೊಳ್ಳಬಾರದೆಂಬುದು ನಮ್ಮ ಚಿಕ್ಕ ಸಲಹೆ. ಇದರ ಹತ್ತಿರದಲ್ಲೆ ಕಾಣಸಿಗುವ ಮತ್ತೊಂದು ಕಡಲ ತೀರವೆಂದರೆ ಬೆನೌಲಿಮ್. ಇದೂ ಕೂಡ ಸ್ವಚ್ಛವಾಗಿದ್ದು ಬಿಳಿ ಬಣ್ಣದ ಮರಳಿನಿಂದ ಕಂಗೊಳಿಸುತ್ತದೆ.

ದಕ್ಷಿಣ ಗೋವಾದಲ್ಲಿರುವ ಕೋಲ್ವಾದಿಂದ ರಸ್ತೆಯ ಮುಖಾಂತರ ವರ್ಕಾವನ್ನು ತಲುಪಬಹುದು. ಬೇರೆ ಬೇರೆ ಪಟ್ಟಣಗಳಿಂದ ಇಲ್ಲಿಗೆ ತಲುಪಲು ಕ್ಯಾಬಗಳು ಕೂಡ ದೊರೆಯುತ್ತವೆ. ಇದು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವುದರಿಂದ ನೇರವಾಗಿಯೂ ಕೂಡ ವರ್ಕಾ ತಲುಪಬಹುದಾಗಿದೆ. ಪಣಜಿಗಿಂತಲೂ ವಾಸ್ಕೊಗೆ ಹತ್ತಿರವಾಗಿರುವ ವರ್ಕಾವನ್ನು ಹಲವಾರು ಬೇರೆ ಬೇರೆ ರೈಲು ನಿಲ್ದಾಣಗಳಿಂದಲೂ ಕೂಡ ಮುಟ್ಟಬಹುದು.

ವರ್ಕಾ ಪ್ರಸಿದ್ಧವಾಗಿದೆ

ವರ್ಕಾ ಹವಾಮಾನ

ಉತ್ತಮ ಸಮಯ ವರ್ಕಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವರ್ಕಾ

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed